ADVERTISEMENT

ದೆಹಲಿಯ ಪಾಲಿಕೆಗಳಲ್ಲಿ ₹2,500 ಕೋಟಿ ಹಗರಣ: ಸಿಬಿಐ ತನಿಖೆಗೆ ನಿರ್ಣಯ

ಪಿಟಿಐ
Published 18 ಡಿಸೆಂಬರ್ 2020, 10:26 IST
Last Updated 18 ಡಿಸೆಂಬರ್ 2020, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿಯ ಆಡಳಿತವಿರುವ ದೆಹಲಿಯ ಮಹಾನಗರ ಪಾಲಿಕೆಗಳಲ್ಲಿ ನಡೆದಿದೆ ಎನ್ನಲಾದ ₹2,500 ಕೋಟಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸ‌ಲು ದೆಹಲಿ ವಿಧಾನಸಭೆ ಶುಕ್ರವಾರ ಧ್ವನಿಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿತು.

ವಿಧಾನಸಭೆ ಅಧಿವೇಷನದಲ್ಲಿ ಎಎಪಿ ಶಾಸಕ ಸೌರಭ್ ಭರದ್ವಾಜ್ ಅವರು ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದರು.

‘ಬಿಜೆಪಿ ಆಡಳಿತದ ದೆಹಲಿಯ ಪಾಲಿಕೆಗಳಲ್ಲಿ ಆಗಾಗ ಹಗರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಈಗೀನ ಕೌನ್ಸಿಲರ್‌ಗಳು ಮುಂಚಿನ ಭ್ರಷ್ಟಾಚಾರದ ದಾಖಲೆಗಳನ್ನು ಮುರಿದಿದ್ದಾರೆ‘ ಎಂದು ಅವರು ಹೇಳಿದರು.

ADVERTISEMENT

‘ಇಲ್ಲಿನ ಪಾಲಿಕೆಗಳು ದೆಹಲಿಯ ಮಗಳಿದ್ದಂತೆ. ಅದನ್ನು ಬಿಜೆಪಿಗೆ ನೀಡಲಾಗಿದೆ. ಆದರೆ ಬಿಜೆಪಿಯು ಮಗಳೊಂದಿಗೆ ಅತ್ತೆಯಂತೆ ವರ್ತಿಸುತ್ತಿದೆ’ ಎಂದು ಭರದ್ವಾಜ್ ಅವರು ಆರೋಪಿಸಿದರು.

‘ಇಲ್ಲಿ ಕೋಟಿಗಟ್ಟಲೆ ಹಣವನ್ನು ಲಂಚ ರೂಪದಲ್ಲಿ ಸ್ವೀಕರಿಸಲಾಗುತ್ತಿದೆ. ಪಾಲಿಕೆ ಕಟ್ಟಡ ನಿರ್ಮಾಣ ವಿಭಾಗವು ಭ್ರಷ್ಟಚಾರ ಮತ್ತು ಲಂಚ ಪಡೆಯುವುದಕ್ಕೆ ಗುರುತಿಸಲ್ಪಡುತ್ತದೆ. ಬಿಜೆಪಿ ಕೌನ್ಸಿಲರೊಬ್ಬರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಲಂಚ ಸ್ವೀಕರಿಸುತ್ತಿರುವಾಗ ಸಿಬಿಐಗೆ ಸಿಕ್ಕಿ ಬಿದ್ದಿದ್ದರು’ ಎಂದು ಅವರು ದೂರಿದರು.

ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ₹2,500 ಕೋಟಿ ಹಗರಣದ ಆರೋಪವು ಆಧಾರರಹಿತವಾಗಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.