ADVERTISEMENT

Delhi Blast | ಫಲಾಹ್ ವಿ.ವಿ ಆವರಣದಲ್ಲಿ ಬ್ರೀಜಾ ಕಾರು ಪತ್ತೆ: ಪೊಲೀಸರಿಂದ ತನಿಖೆ

ಏಜೆನ್ಸೀಸ್
Published 13 ನವೆಂಬರ್ 2025, 11:20 IST
Last Updated 13 ನವೆಂಬರ್ 2025, 11:20 IST
<div class="paragraphs"><p>ಫರೀದಾಬಾದ್‌ನಲ್ಲಿರುವ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಪತ್ತೆಯಾಗಿರುವ&nbsp;ಬ್ರೀಜಾ ಕಾರು</p></div>

ಫರೀದಾಬಾದ್‌ನಲ್ಲಿರುವ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಪತ್ತೆಯಾಗಿರುವ ಬ್ರೀಜಾ ಕಾರು

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ಮಾರುತಿ ‌ಬ್ರೀಜಾ ಕಾರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಪ್ರಕರಣದಲ್ಲಿ ಬಳಸಿರುವ 3ನೇ ಕಾರು ಎನ್ನಲಾಗಿದೆ.

ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್‌–ಫಲಾಹ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಅನುಮಾನಾಸ್ಪದ ಬ್ರೀಜಾ ಕಾರು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ನವೆಂಬರ್ 10ರಂದು (ಸೋಮವಾರ) ಕೆಂಪುಕೋಟೆಯ ಬಳಿ ಬಿಳಿ ಬಣ್ಣದ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ 13 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಘಟನೆ ಬಳಿಕ ತೀವ್ರ ಶೋಧ ನಡೆಸಿದ್ದ ತನಿಖಾಧಿಕಾರಿಗಳು ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಡಾ. ಉಮರ್ ನಬಿ ಮಾಲೀಕತ್ವದ ಕೆಂಪು ಬಣ್ಣದ ‘ಫೋರ್ಡ್‌ ಎಕೋಸ್ಪೋರ್ಟ್‌’ ಕಾರನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಫರೀದಾಬಾದ್‌ ಬಳಿ ಈ ಕಾರು ಪತ್ತೆಯಾಗಿತ್ತು.

ಹುಂಡೈ ಐ20 ಕಾರಿನ ಜತೆಗೆ ಫೋರ್ಡ್‌ ಎಕೋಸ್ಪೋರ್ಟ್‌ ಹಾಗೂ ‌ಬ್ರೀಜಾ ಕಾರನ್ನೂ ಸ್ಫೋಟಕ್ಕೆ ಬಳಸುವ ಸಂಚನ್ನು ಉಮರ್‌ ಮಾಡಿರಬಹುದು ಎಂಬ ಶಂಕೆಯಿದೆ. ಈ ದಿಸೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ರೀಜಾ ಕಾರನ್ನು ಆರೋಪಿಗಳು ಸ್ಥಳ ಪರಿಶೀಲನೆ ನಡೆಸಲು ಅಥವಾ ತಪ್ಪಿಸಿಕೊಳ್ಳಲು ಬಳಸಿದ್ದಾರೆಂದು ಶಂಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.