ADVERTISEMENT

Delhi Blast | ಉಮರ್‌ ನಬಿ ಜೊತೆ ಸೇರಿ ಸಂಚು: ಕಾಶ್ಮೀರ ನಿವಾಸಿ ಸೆರೆ

ಪಿಟಿಐ
Published 16 ನವೆಂಬರ್ 2025, 15:51 IST
Last Updated 16 ನವೆಂಬರ್ 2025, 15:51 IST
   

ನವದೆಹಲಿ: ದೆಹಲಿಯ ಕೆಂಪು ಕೋಟೆ ಸಂಭವಿಸಿದ ಕಾರು ಸ್ಫೋಟಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಕಾಶ್ಮೀರ ನಿವಾಸಿಯೊಬ್ಬನನ್ನು ಬಂಧಿಸಿದ್ದಾರೆ.

ಅಮೀರ್‌ ರಶೀದ್‌ ಅಲಿ ಬಂಧಿತ. ಸ್ಫೋಟಗೊಂಡ ಕಾರು ಅಮೀರ್‌ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

‘ಈ ಭಯೋತ್ಪಾದಕ ಕೃತ್ಯ ಎಸಗಲು ಅಮೀರ್‌, ಆತ್ಮಾಹುತಿ ಬಾಂಬರ್‌ ಡಾ.ಉಮರ್‌ ನಬಿ ಜೊತೆ ಸೇರಿ ಸಂಚು ರೂಪಿಸಿದ್ದ’ ಎಂದು ಎನ್‌ಐಎ ತಿಳಿಸಿದೆ.

ADVERTISEMENT

‘ಬಂಧಿತ ವ್ಯಕ್ತಿ ಜಮ್ಮು–ಕಾಶ್ಮೀರದ ಪಾಂಪೋರ್‌ನ ಸಂಬೂರಾ ನಿವಾಸಿ. ‘ಕಾರಿನಲ್ಲಿ ಇರಿಸುವ ಕಚ್ಚಾ ಬಾಂಬ್’ ಬಳಸಿ ಸ್ಫೋಟಿಸುವ ಉದ್ದೇಶದಿಂದ ಕಾರು ಖರೀದಿಗಾಗಿ ಈತ ದೆಹಲಿಗೆ ಬಂದಿದ್ದ’ ಎಂದು ತಿಳಿಸಿದೆ.

ಇದೇ ಮೊದಲ ಬಾರಿಗೆ ಎನ್‌ಐಎ, ಡಾ.ಉಮರ್ ನಬಿಯನ್ನು ‘ಆತ್ಮಾಹುತಿ ಬಾಂಬರ್‌’ ಎಂದು ಕರೆದಿದೆ. ಸ್ಫೋಟಕಕ್ಕೆ ‘ಕಾರಿನಲ್ಲಿ ಇರಿಸುವ ಕಚ್ಚಾ ಬಾಂಬ್‌’ ಎಂಬ ಪದವನ್ನು ಸಹ ಮೊದಲ ಬಾರಿಗೆ ಬಳಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.