ADVERTISEMENT

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಮರಳಿ ಅಧಿಕಾರಕ್ಕೆ ಅರವಿಂದ ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:24 IST
Last Updated 6 ಫೆಬ್ರುವರಿ 2020, 10:24 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ತೀವ್ರ ಕುತೂಹಲಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತೆ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಕೇಜ್ರಿವಾಲ್‌ ಅವರು ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

ಫೆ.8ರಂದು, 70 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು 42 ರಿಂದ 56 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿಯು 10 ರಿಂದ 24 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಎಬಿಪಿ–ಸಿ ವೋಟರ್‌ ಸಮೀಕ್ಷೆ ಹೇಳಿದೆ.

ADVERTISEMENT

ಟೈಮ್ಸ್‌ ನೌ ಮತ್ತು ಐಪಿಎಸ್‌ಒಎಸ್‌ ನಡೆಸಿರುವ ಸಮೀಕ್ಷೆಯಲ್ಲಿ ಆಮ್‌ ಆದ್ಮಿ ಪಕ್ಷ 54 ರಿಂದ 60 ಸ್ಥಾನ ಗೆಲ್ಲಲಿದ್ದು, ಬಿಜೆ‍ಪಿಯು 10 ರಿಂದ 14 ಸ್ಥಾನ ತನ್ನದಾಗಿಸಿಕೊಳ್ಳಲಿದೆ. ಕಾಂಗ್ರೆಸ್‌ ಪಕ್ಷವು 0 ರಿಂದ 2 ಸ್ಥಾನಗಳಲ್ಲಿ ಜಯ ಸಾಧಿಸಲಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ 67 ಶಾಸಕರು ಆಯ್ಕೆಯಾಗಿದ್ದರು. ‌

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ...

‘ಎಬಿಪಿ–ಸಿ ವೋಟರ್‌ ಸಮೀಕ್ಷೆ’

ಮತ ಗಳಿಕೆ ಪ್ರಮಾಣ
ಎಎಪಿ: 45.6%
ಬಿಜೆಪಿ: 37.1%
ಕಾಂಗ್ರೆಸ್‌: 4.4%
ಇತರರು: 12.9%

ಸ್ಥಾನ ಗಳಿಕೆ
ಎಎಪಿ: 42-56
ಬಿಜೆಪಿ: 10-24
ಕಾಂಗ್ರೆಸ್‌: 0-4
ಇತರರು: 0
***
ಟೈಮ್ಸ್‌ ನೌ–ಐಪಿಎಸ್‌ಒಎಸ್‌ ಸಮೀಕ್ಷೆ

ಮತ ಗಳಿಕೆ ಪ್ರಮಾಣ
ಎಎಪಿ: 52%
ಬಿಜೆಪಿ: 34%
ಕಾಂಗ್ರೆಸ್‌: 4%
ಇತರರು: 10%

ಸ್ಥಾನ ಗಳಿಕೆ
ಎಎಪಿ: 54-60
ಬಿಜೆಪಿ: 10-14
ಕಾಂಗ್ರೆಸ್‌: 0-2
ಇತರರು: 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.