ADVERTISEMENT

ದೆಹಲಿ ಮಹಿಳೆರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಪಿಂಕ್‌ ಕಾರ್ಡ್‌: ಏನಿದರ ವಿಶೇಷತೆ?

ಪಿಟಿಐ
Published 2 ಮಾರ್ಚ್ 2026, 13:47 IST
Last Updated 2 ಮಾರ್ಚ್ 2026, 13:47 IST
   

ನವದೆಹಲಿ: ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಉಚಿತ ಬಸ್‌ ಪ್ರಯಾಣ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಏಕರೂಪ ಸ್ಮಾರ್ಟ್ ಕಾರ್ಡ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ಪಿಂಕ್‌ ಸಹೇಲಿ ಸ್ಮಾರ್ಟ್‘ ಕಾರ್ಡ್‌ಗಳನ್ನು ದೆಹಲಿ ಸರ್ಕಾರ ಜಾರಿಗೆ ತಂದಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿ ದೆಹಲಿ ಸರ್ಕಾರದ ಪಿಂಕ್ ಮೊಬಿಲಿಟಿ ಕಾರ್ಡ್ ಸೇರಿದಂತೆ ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದರು.

ಪಿಂಕ್ ಕಾರ್ಡ್ ಬಳಸಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಇದಲ್ಲದೆ ದೆಹಲಿ ಮೆಟ್ರೊ ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೂ (ಆರ್‌ಆರ್‌ಟಿಎಸ್) ಹಣ ಪಾವತಿ ಮಾಡುವ ಮೂಲಕ ಇದೇ ಕಾರ್ಡ್‌ ಬಳಸಿ ಪ್ರಯಾಣಿಸಬಹುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ಯೋಜನೆಯಡಿ ಫಲಾನುಭವಿಗಳ ವಯಸ್ಸು, ಲಿಂಗ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದಾರೆಯೇ? ಎಂದು ಪರಿಶೀಲಿಸಲಾಗುತ್ತದೆ. ಪಿಂಕ್‌ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್‌ ಮಾಡಲಾಗುತ್ತದೆ.

ಯೋಜನೆಯಡಿ ಮೂರು ಬಣ್ಣದ ಕಾರ್ಡ್‌ಗಳನ್ನು ಪರಿಚಯಿಸಲಾಗಿದೆ. ಮಹಿಳೆಯರಿಗೆ 'ಪಿಂಕ್', ಸಾಮಾನ್ಯ ಪ್ರಯಾಣಿಕರಿಗೆ 'ಬ್ಲೂ' ಮತ್ತು ಮಾಸಿಕ ಪಾಸ್ ಬಳಕೆದಾರರಿಗೆ 'ಆರೆಂಜ್' ಕಾರ್ಡ್‌ಗಳನ್ನು ನೀಡಲಾಗುತ್ತದೆ. ಮಹಿಳೆಯರಿಗೆ ನೆರವಾಗಲು 'ಪಿಂಕ್ ಸಹೇಲಿ' ಆನ್‌ಲೈನ್ ಪೋರ್ಟಲ್ ಕೂಡ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.