ADVERTISEMENT

ದೆಹಲಿಯ 5 ಮಾರುಕಟ್ಟೆಗಳು ವಿಶ್ವದರ್ಜೆಗೆ: ಕೇಜ್ರಿವಾಲ್

ಪಿಟಿಐ
Published 13 ಜೂನ್ 2022, 12:52 IST
Last Updated 13 ಜೂನ್ 2022, 12:52 IST
ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ   

ನವದೆಹಲಿ: ದೆಹಲಿಯಲ್ಲಿರುವ ಕಮಲಾ ನಗರ, ಖಾರಿ ಬಾವಲಿ, ಲಜಪತ್ ನಗರ, ಸರೋಜಿನಿ ನಗರ ಮತ್ತು ಕೀರ್ತಿ ನಗರ ಮಾರುಕಟ್ಟೆಗಳನ್ನು ಮರು ಅಭಿವೃದ್ಧಿಪಡಿಸಿ ವಿಶ್ವದರ್ಜೆಗೆ ಏರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಈ ಕುರಿತು ಸೋಮವಾರ ಮಾತನಾಡಿದ ಅವರು,‘ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ‘ರೋಜ್‌ಗಾರ್ ಬಜೆಟ್‌’ ಘೋಷಣೆ ಭಾಗವಾಗಿ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಮರು ಅಭಿವೃದ್ಧಿಪಡಿಸಲಿರುವ 5 ಮಾರುಕಟ್ಟೆಗಳನ ಹೆಸರುಗಳನ್ನು ಅಂತಿಮಗೊಳಿಸಿದ್ದೇವೆ. ಉದಾಹರಣೆಗೆ ಕಮಲಾ ನಗರವನ್ನು ಯುವಕರ ಹ್ಯಾಂಗ್ಔಟ್ ವಲಯ, ಖಾರಿ ಬಾವಲಿಯನ್ನು ಉತ್ತಮ ಮಸಾಲೆ ಪದಾರ್ಥಗಳಿಂದ ಗುರುತಿಸಲಾಗುವುದು’ ಎಂದು ಸೋಮವಾರ ತಿಳಿಸಿದರು.

ಅಲ್ಲದೆ, ಮಾರುಕಟ್ಟೆ ಮರು ಅಭಿವೃದ್ಧಿಯ ಅಂತಿಮ ಯೋಜನೆಗಾಗಿ ವಿನ್ಯಾಸ ಸ್ಪರ್ಧೆ ಏರ್ಪಡಿಸಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.