ADVERTISEMENT

ಸಿಧು ಪತ್ನಿ ಕ್ಯಾನ್ಸರ್ ಚಿಕಿತ್ಸೆ: ಅಧ್ಯಯನ ಕೋರಿದ್ದ PIL ವಜಾಗೊಳಿಸಿದ ದೆಹಲಿ HC

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2024, 10:23 IST
Last Updated 4 ಡಿಸೆಂಬರ್ 2024, 10:23 IST
<div class="paragraphs"><p>ದೆಹಲಿ HC</p></div>

ದೆಹಲಿ HC

   

ನವದೆಹಲಿ: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿಗೂ ಇದೆ ಎಂದು ಹೇಳಿರುವ ದೆಹಲಿ ಹೈಕೋರ್ಟ್, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿಗೆ 4ನೆಯ ಹಂತದ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಕೆಲವು ಕ್ರಮಗಳು ನೆರವಿಗೆ ಬಂದಿದ್ದವು ಎಂದು ಹೇಳಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಇದ್ದ ವಿಭಾಗೀಯ ಪೀಠವು, ‘ಸಿಧು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅವರ ಅನಿಸಿಕೆಯನ್ನು ವಿರೋಧಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ’ ಎಂದು ಹೇಳಿದೆ.

ADVERTISEMENT

‘ಸಿಧು ಅವರ ಅಭಿಪ್ರಾಯವನ್ನು ಒಂದು ಪತ್ರಿಕಾಗೋಷ್ಠಿ ಕರೆದು ಅಲ್ಲಗಳೆಯಿರಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕವೇ ಎದುರಿಸಿ. ಕಾನೂನಿನ ಕ್ರಮ ಅಥವಾ ನ್ಯಾಯಾಂಗ ನಿಂದನೆಯ ಭೀತಿ ಸೃಷ್ಟಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು. ದೇಶದಲ್ಲಿ ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ’ ಎಂದು ಪೀಠವು ಹೇಳಿತು.

‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಲಗಾಮು ಹಾಕಬೇಕು ಎಂದು ನೀವು ಹೇಳುವಂತಿಲ್ಲ. ಸಿಧು ಅವರ ಹೇಳಿಕೆಯನ್ನು ನೀವು ವಿರೋಧಿಸಬಹುದು... ಅವರ ಮಾತನ್ನು ನೀವು ಒಪ್ಪುವುದಿಲ್ಲ ಎಂದಾದರೆ, ಅವರ ಮಾತನ್ನು ಕೇಳಿಸಿಕೊಳ್ಳಲೂ ಹೋಗಬೇಡಿ...’ ಎಂದು ಪೀಠವು ಹೇಳಿತು. ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.