ADVERTISEMENT

156 ಕೆ.ಜಿ ಗಾಂಜಾ ವಶಪಡಿಸಿಕೊಂಡ ದೆಹಲಿ ಪೊಲೀಸರು: ಇಬ್ಬರ ಬಂಧನ

ಪಿಟಿಐ
Published 9 ಮಾರ್ಚ್ 2025, 10:18 IST
Last Updated 9 ಮಾರ್ಚ್ 2025, 10:18 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಅಂತರರಾಜ್ಯ ಗಾಂಜಾ ದಂಧೆಯನ್ನು ದೆಹಲಿ ಪೊಲೀಸರು ಮಟ್ಟ ಹಾಕಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಅವರಿಂದ ₹78 ಲಕ್ಷ ಮೌಲ್ಯದ 156 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ADVERTISEMENT

ನಿರ್ದಿಷ್ಟ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ವಿಭಾಗ, ಫೆಬ್ರುವರಿ 24 ರಂದು, ರಾಜಾ ಗಾರ್ಡನ್ ಫ್ಲೈಓವರ್ ರಾಜಸ್ಥಾನದ ನಿವಾಸಿ ವಿಜಯ್ ಸಿಂಗ್ (43) ಅವರನ್ನು ಬಂಧಿಸಿದ್ದರು. ಅವರ ಕಾರಿನಲ್ಲಿ ಗಾಂಜಾ ಇದ್ದ 75 ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾನು ಮಾದಕವಸ್ತು ಕಳ್ಳಸಾಗಣೆದಾರ ವಿನೀತ್ ಎಂಬಾತನ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗಿಯೂ, ನಾಗ್ಪುರದಿಂದ ಇವುಗಳನ್ನು ಖರೀದಿ ಮಾಡಿದ್ದಾಗಿಯೂ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಸೋನಿಯಾ ವಿಹಾರ್ ನಿವಾಸಿ ಅಮಿತ್‌ಗೆ ಸರಕುಗಳನ್ನು ತಲುಪಿಸುವುದು ಅವರ ಪ್ರಾಥಮಿಕ ಕೆಲಸವಾಗಿತ್ತು. ಅಮಿತ್‌ನನ್ನು ಫೆಬ್ರುವರಿ 28 ರಂದು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿನೀತ್‌ನ ನಿಕಟ ಸಂಬಂಧಿಯಾಗಿರುವ ಅಮಿತ್, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಂಭಾವ್ಯ ಖರೀದಿದಾರರಿಗೆ ಗಾಂಜಾ ವಿತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎಂದು ತಿಳಿದುಬಂದಿದೆ.

ಅಮಿತ್ ಅಪರಾಧ ಹಿನ್ನೆಲೆ ಇದ್ದು, ನಾಲ್ಕು ಅಬಕಾರಿ ಮತ್ತು ಒಂದು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಮಾದಕವಸ್ತು ಜಾಲದಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.