ADVERTISEMENT

ದೆಹಲಿ ವಿಶ್ವವಿದ್ಯಾಲಯ: ಪದವಿಗೆ ಆನ್‌ಲೈನ್‌ ಪ್ರವೇಶ ಪ್ರಕ್ರಿಯೆಗೆ ಚಾಲನೆ

ಪಿಟಿಐ
Published 12 ಅಕ್ಟೋಬರ್ 2020, 7:51 IST
Last Updated 12 ಅಕ್ಟೋಬರ್ 2020, 7:51 IST
   

ನವದೆಹಲಿ: ಕೋವಿಡ್–19 ಕಾರಣದಿಂದ ಮೂಡಿರುವ ಪರಿಸ್ಥಿತಿಯಿಂದಾಗಿ ದೆಹಲಿ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್‌ಗಳಿಗೆಪೂರ್ಣಪ್ರಮಾಣದಲ್ಲಿ ಆನ್‌ಲೈನ್‌ ಮೂಲಕವೇ ಪ್ರವೇಶವನ್ನು ಕಲ್ಪಿಸಲಿದೆ.

ಆನ್‌ಲೈನ್‌ ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ವಿದ್ಯಾರ್ಥಿಗಳು ಕಾಲೇಜುಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಮೂರು ಕೋರ್ಸ್‌ಗಳಿಗೆ ಅನ್ವಯಿಸಿ ದೆಹಲಿಯ ಲೇಡಿ ಶ್ರೀ ರಾಮ್‌ ಕಾಲೇಜಿಗೆ ಪ್ರವೇಶ ಕಲ್ಪಿಸಲು ಶೇ 100ರಷ್ಟು ಅಂಕಗಳೊಂದಿಗೆ ಕಟ್‌ಆಫ್‌ ಪಟ್ಟಿಯನ್ನು ಪ್ರಕಟಿಸುವ ಮೂಲಕ ಆನ್‌ಲೈನ್ ಪ್ರವೇಶಕ್ಕೆ ವಿಶ್ವವಿದ್ಯಾಲಯವು ಚಾಲನೆ ನೀಡಿದೆ.

ADVERTISEMENT

ವಿಶ್ವವಿದ್ಯಾಲಯದ ಪ್ರವೇಶ ಮತ್ತು ಕುಂದುಕೊರತೆ ಆಲಿಕೆ ವಿಭಾಗದ ಪ್ರತಿನಿಧಿಗಳು ಹಾಗೂ ನೋಡಲ್‌ ಅಧಿಕಾರಿ ಪ್ರತಿ ಕಾಲೇಜಿನಲ್ಲಿ ಹಾಜರಿರಲಿದ್ದು, ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ನೆರವಾಗುವರು ಎಂದು ಡೀನ್‌ (ಪ್ರವೇಶ) ಶೋಭಾ ಬಾಗೈ ಅವರು ತಿಳಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಐದು ವರ್ಷಗಳ ಅಂತರದ ನಂತರ ಶೇ 100ರಷ್ಟು ಅಂಕಗಳೊಂದಿಗೆ ಕಟ್‌ ಆಫ್‌ ಪಟ್ಟಿಯನ್ನು ಪ್ರಕಟಿಸಲಾಗಿದೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಲಭ್ಯವಿರುವ ಸುಮಾರು 70,000 ಸೀಟುಗಳಿಗೆ ಅನ್ವಯಿಸಿ ಪ್ರವೇಶ ಕೋರಿ ಸುಮಾರು 3.54 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.