ADVERTISEMENT

ಸ್ವದೇಶಿ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ ನೌಕಾಪಡೆ ಸೇವೆಗೆ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 9:01 IST
Last Updated 28 ಸೆಪ್ಟೆಂಬರ್ 2019, 9:01 IST
ಭಾರತದಲ್ಲೇ ತಯಾರಿಸಲಾದ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ನೌಕಾಪಡೆಗೆ ನಿಯೋಜನೆ ಮಾಡಿದರು.
ಭಾರತದಲ್ಲೇ ತಯಾರಿಸಲಾದ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ನೌಕಾಪಡೆಗೆ ನಿಯೋಜನೆ ಮಾಡಿದರು.   

ಮುಂಬೈ:ಭಾರತದಲ್ಲೇ ತಯಾರಿಸಲಾದ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ಯನ್ನು ಕೇಂದ್ರ ರಕ್ಷಣಾಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ನೌಕಾಪಡೆಗೆ ನಿಯೋಜನೆ ಮಾಡಿದರು.

ಇದೇ ಸಂದರ್ಭದಲ್ಲಿ ಅವರು ಸ್ಕಾರ್ಪೀನ್ ಸರಣಿಯ 2ನೇ ಸಮರ ಜಲಾಂತರ್ಗಾಮಿ ‘ಐಎನ್‌ಎಸ್ ಖಾಂಡೇರಿ’ಯನ್ನೂ ನೌಕಾಪಡೆಯ ಸೇವೆಗೆ ನಿಯೋಜಿಸಿದರು.

ಹೆಮ್ಮೆಯ ಸಂಗತಿ: ರಾಜನಾಥ್

ADVERTISEMENT

ಯುದ್ಧ ನೌಕೆ ’ನೀಲಗಿರಿ‘ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತೋಷ ತಂದಿದೆ. ಪ್ರಾಜೆಕ್ಟ್‌ 17 ಅಲ್ಫಾ(ಪಿ17 ಎ) ಸರಣಿಯ ಹಡಗುಗಳಲ್ಲಿ ಮೊದಲನೇಯ ಹಾಗೂ ಪ್ರಬಲವಾದ ಯುದ್ಧನೌಕೆಗೆ ಚಾಲನೆ ನೀಡಿದ್ದು ನನಗೆ ತುಂಬಾ ತೃಪ್ತಿ ತಂದಿದೆ ಹಾಗೂ ಹೆಮ್ಮೆಯ ಸಂಗತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹೇಳಿದರು.

ಬ್ರಿಟನ್‌ನ ‘ಲಿಯಾಂಡರ್’ ಸರಣಿಯ ಯುದ್ಧನೌಕೆಗಳ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಎರವಲು ಪಡೆದು, ಭಾರತದಲ್ಲೇ ನಿರ್ಮಿಸಿದ ಮೊದಲ ಯುದ್ಧನೌಕೆ ಐಎನ್‌ಎಸ್‌ ನೀಲಗಿರಿ. ಈ ಸರಣಿಯಲ್ಲಿ ಒಟ್ಟು ಆರು ಯುದ್ಧನೌಕೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ಸೇವೆಯಿಂದ ನಿವೃತ್ತವಾಗಿವೆ. ಅವೇ ಹೆಸರಿನಲ್ಲಿ ಈಗ ಹೊಸದಾಗಿ ಏಳು ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಐಎನ್‌ಎಸ್‌ ನೀಲಗಿರಿ ಮೊದಲನೆಯದ್ದು.

‘ನೀಲಗಿರಿ‘ ನೌಕಾಪಡೆಗೆ ಸೇರ್ಪಡೆಯಾಗುವ ಮೂಲಕ ನೌಕಾಪಡೆಯ ಹಾಗೂ ದೇಶದ ರಕ್ಷಣಾ ಕ್ಷೇತ್ರದ ಬಲವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.