ADVERTISEMENT

ಎನ್‌ಸಿಬಿ ಮುಖ್ಯಸ್ಥರ ವಿರುದ್ಧದ ಪ್ರಕರಣ: ಅರ್ಜಿ ಹಿಂಪಡೆದ ದಂತ ವೈದ್ಯ

ಪಿಟಿಐ
Published 8 ಫೆಬ್ರುವರಿ 2021, 14:07 IST
Last Updated 8 ಫೆಬ್ರುವರಿ 2021, 14:07 IST

ನವದೆಹಲಿ: ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ಮುಖ್ಯಸ್ಥ ರಾಕೇಶ್‌ ಅಸ್ತಾನಾ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ದೇಶಿಸುವಂತೆ ಕೋರಿ ಚಂಡೀಗಡ ಮೂಲದ ದಂತ ವೈದ್ಯರೊಬ್ಬರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಹಿಂಪಡೆದಿದ್ದಾರೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ರವೀಂದ್ರ ಭಟ್‌ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ ಅರ್ಜಿದಾರರು, ಈ ಕುರಿತು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿದರು.

ಬಿಎಸ್‌ಎಫ್‌ನ ಮುಖ್ಯಸ್ಥರಾಗಿಯೂ ಇರುವ ಅಸ್ತಾನಾ ಅವರ ವಿರುದ್ಧ ಅರ್ಜಿದಾರರಾದ ಮೋಹಿತ್‌ ಧವನ್‌ ಅವರು 2019ರಲ್ಲಿ ಸಿಬಿಐ ನಿರ್ದೇಶಕರ ಬಳಿ ದೂರು ದಾಖಲಿಸಿದ್ದರು. ಆದರೆ ಅದರ ಬಗ್ಗೆ ಯಾವುದೇ ಕ್ರಮ ಆಗಿರಲಿಲ್ಲ. ಸುಲಿಗೆ, ಕಿರುಕುಳ, ದಾಖಲೆಗಳನ್ನು ಸೃಷ್ಟಿಸಿದ ಆರೋಪವನ್ನು ಧವನ್‌ ಅವರು ಅಸ್ತಾನಾ ವಿರುದ್ಧ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.