ADVERTISEMENT

ಮಗಳ ಬಗ್ಗೆ ಕಾಳಜಿ ವಹಿಸುವ ಫಡಣವೀಸ್ ಮರಾಠ ಮಕ್ಕಳನ್ನು ನಿರ್ಲಕ್ಷಿಸಿದ್ದಾರೆ:ಜಾರಂಗೆ

ಪಿಟಿಐ
Published 5 ಫೆಬ್ರುವರಿ 2025, 9:51 IST
Last Updated 5 ಫೆಬ್ರುವರಿ 2025, 9:51 IST
<div class="paragraphs"><p>ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು&nbsp;ಮನೋಜ್‌ ಜಾರಂಗೆ ಪಾಟೀಲ್‌</p></div>

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಮನೋಜ್‌ ಜಾರಂಗೆ ಪಾಟೀಲ್‌

   

-ಪಿಟಿಐ ಚಿತ್ರಗಳು

ಸಂಭಾಜಿನಗರ: ‘ಮಗಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮರಾಠರ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಮೀಸಲಾತಿ ನೀಡುತ್ತಿಲ್ಲ ಏಕೆ’ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜಾರಂಗೆ ಪಾಟೀಲ್‌ ಪ್ರಶ್ನಿಸಿದ್ದಾರೆ.

ADVERTISEMENT

‘ನನ್ನ ಮಗಳ 10ನೇ ತರಗತಿ ಪರೀಕ್ಷೆ ಮುಗಿಯುವವರೆಗೆ ಮುಂಬೈನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಸ್ಥಳಾಂತರಗೊಳ್ಳುವುದನ್ನು ಮುಂದೂಡಿದ್ದೇನೆ’ ಎಂದು ಸಿಎಂ ದೇವೇಂದ್ರ ಫಡಣವೀಸ್‌ ಅವರು ಈಚೆಗೆ ತಿಳಿಸಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜರಾಂಗೆ, ‘ಮಗಳ ಮೇಲಿನ ತಂದೆಯ ಪ್ರೀತಿಯನ್ನು ನೋಡಿದ್ದೇವೆ. ದೇವೇಂದ್ರ ಫಡಣವೀಸ್‌ ಅವರಿಗೆ ಮಗಳ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಮರಾಠ ಸಮುದಾಯದ ಮಕ್ಕಳ ಬಗ್ಗೆ ಏಕೆ ಕಾಳಜಿ ವಹಿಸುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

‘ನಿಮ್ಮ ಮಗಳ ಸಲುವಾಗಿ ನೀವು ಕೇವಲ 500 ಮೀಟರ್ ದೂರದಲ್ಲಿರುವ ಬೇರೆ ಬಂಗಲೆಗೆ ಸ್ಥಳಾಂತರಗೊಳ್ಳುತ್ತಿಲ್ಲ. ಹಾಗಾದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ನೇಣು ಬಿಗಿದುಕೊಳ್ಳುವ ನಮ್ಮ ಮಕ್ಕಳ ಸ್ಥಿತಿ ನಿಮಗೆ ಏಕೆ ಆರ್ಥವಾಗುತ್ತಿಲ್ಲ’ ಎಂದು ಜಾರಂಗೆ ಟೀಕಿಸಿದ್ದಾರೆ.

‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಧಂಗರ್ ಸಮುದಾಯವನ್ನು ಮರಾಠರ ವಿರುದ್ಧ ಎತ್ತಿಕಟ್ಟಿದ್ದರು. ಹತ್ತು ವರ್ಷಗಳ ಕಾಲ ಮೀಸಲಾತಿಯ ಭರವಸೆಯೊಂದಿಗೆ ಧಂಗರ್ ಸಮುದಾಯವನ್ನು ದಾರಿ ತಪ್ಪಿಸಿದ್ದರು. ಇವತ್ತಿನವರೆಗೂ ಮೀಸಲಾತಿ ಕಾರ್ಯರೂಪಕ್ಕೆ ಬರಲೇ ಇಲ್ಲ’ ಎಂದು ಫಡಣವೀಸ್‌ ವಿರುದ್ಧ ಜಾರಂಗೆ ಗುಡುಗಿದ್ದಾರೆ.

ಮನೋಜ್‌ ಜಾರಂಗೆ ಅವರು ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.