ADVERTISEMENT

ದಿನಕರನ್‌ ಆಪ್ತ ಸೆಂಥಿಲ್‌ ಡಿಎಂಕೆಗೆ ಸೇರ್ಪಡೆ

ಪಿಟಿಐ
Published 14 ಡಿಸೆಂಬರ್ 2018, 12:36 IST
Last Updated 14 ಡಿಸೆಂಬರ್ 2018, 12:36 IST
ಸೆಂಥಿಲ್‌ ಬಾಲಜಿ ಅವರು ಶುಕ್ರವಾರ ಚೆನ್ನೈನ ಡಿಎಂಕೆ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅಧ್ಯಕ್ಷ ಸ್ಟಾಲಿನ್‌ ಹಾಗೂ ಇತರ  ಮುಖಂಡರು ಇದ್ದರು –ಪಿಟಿಐ ಚಿತ್ರ
ಸೆಂಥಿಲ್‌ ಬಾಲಜಿ ಅವರು ಶುಕ್ರವಾರ ಚೆನ್ನೈನ ಡಿಎಂಕೆ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅಧ್ಯಕ್ಷ ಸ್ಟಾಲಿನ್‌ ಹಾಗೂ ಇತರ  ಮುಖಂಡರು ಇದ್ದರು –ಪಿಟಿಐ ಚಿತ್ರ   

ಚೆನ್ನೈ: ಅಮ್ಮ ಮಕ್ಕಳ್‌ ಮುನ್ನೇತ್ರ ಕಳಗಂ (ಎಎಂಎಂಕೆ) ನಾಯಕ ಟಿ.ಟಿ.ವಿ.ದಿನಕರನ್‌ ಅವರ ಆಪ್ತ ವಿ. ಸೆಂಥಿಲ್‌ ಬಾಲಜಿ ಅವರು ಶುಕ್ರವಾರ ಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.

ಎಐಎಡಿಎಂಕೆಯ 18 ಅನರ್ಹ ಶಾಸಕ ಪೈಕಿ ಒಬ್ಬರಾಗಿದ್ದ ಸೆಂಥಿಲ್‌ ಅವರು ಇಲ್ಲಿನ ಡಿಎಂಕೆ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿರುದ್ಧ ಬಂಡಾಯವೆದ್ದ ಆರೋಪದಲ್ಲಿ 18 ಶಾಸಕರನ್ನು ಸ್ಪೀಕರ್‌ ಧನಪಾಲ್‌ ಅವರು ಅನರ್ಹಗೊಳಿಸಿದ್ದರು.

ADVERTISEMENT

ಅನರ್ಹತೆಯನ್ನು ಎತ್ತಿ ಹಿಡಿದ ಮದ್ರಾಸ್‌ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂಬ ದಿನಕರನ್‌ ನಿರ್ಧಾರದ ಬಗ್ಗೆ ಅನರ್ಹಗೊಂಡಿರುವ ಕೆಲ ಶಾಸಕರಲ್ಲಿ ಅತೃಪ್ತಿ ಇತ್ತು ಎಂದು ಮೂಲಗಳು ತಿಳಿಸಿವೆ.

‘ಸ್ವಾರ್ಥ ಹಿತಾಸಕ್ತಿ ಇರುವವರು ಎಎಂಎಂಕೆ ತೊರೆದರೆ ಪಶ್ಚಾತಾಪವಿಲ್ಲ’ಎಂದು ದಿನಕರ್‌ ಗುರುವಾರ ಸೆಂಥಿಲ್‌ ಅವರನ್ನು ಗುರಿಯಾಗಿಸಿ ಟೀಕೆ ಮಾಡಿದ್ದರು.

‘ಸಮರ್ಪಣಾ ಭಾವವಿರುವ ಕಾರ್ಯಕರ್ತರು ನಿಜವಾದ ಚಿನ್ನದಂತೆ. ನಕಲಿಗಳು ಪಕ್ಷ ಬಿಟ್ಟರೂ ಯಾರೂ ವಿಷಾದಿಸುವುದಿಲ್ಲ’ಎಂದೂ ಹೇಳಿದ್ದರು.

2011–16ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್‌ ಸಾರಿಗೆ ಸಚಿವರಾಗಿದ್ದರು. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚ್ಚಿ ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.