ನರೇಂದ್ರ ಮೋದಿ, ಎಲ್.ಕೆ. ಅಡ್ವಾನಿ, ಪ್ರತಿಭಾ ಅಡ್ವಾನಿ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾನಿ ಅವರ 98ನೇ ಜನ್ಮದಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಶುಭ ಕೋರಿರುವ ಪ್ರಧಾನಿ ಮೋದಿ, ‘ಅತ್ಯುನ್ನತ ದೂರದೃಷ್ಟಿ ಹಾಗೂ ಬುದ್ದಿಶಕ್ತಿಯನ್ನು ವರವಾಗಿ ಪಡೆದಿರುವ ಎಲ್.ಕೆ. ಅಡ್ವಾನಿ ಅವರು ದೇಶದ ಪ್ರಗತಿಯನ್ನು ಸದೃಢಗೊಳಿಸಲು ಅವುಗಳನ್ನು ಧಾರೆ ಎರೆದಿದ್ದಾರೆ. ನಿಸ್ವಾರ್ಥ ಸೇವೆ ಹಾಗೂ ತಮ್ಮ ತತ್ವಗಳಿಗೆ ಬದ್ಧರಾಗಿದ್ದಾರೆ. ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸ್ಕೃತಿಗೆ ಸುಭದ್ರ ಬುನಾದಿ ಹಾಕಿದೆ. ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ’ ಎಂದಿದ್ದಾರೆ.
99ನೇ ವಸಂತಕ್ಕೆ ಕಾಲಿಟ್ಟ ಅಡ್ವಾನಿ ಅವರಿಗೆ ಇದೇ ವರ್ಷ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಕೇಂದ್ರ ಸಚಿವರು, ಪಕ್ಷದ ಮುಖಂಡರು ಶುಭಾಶಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.