ADVERTISEMENT

ನಾವು ಕಾಂಗ್ರೆಸ್ ಮೈತ್ರಿಯನ್ನು ಅವಲಂಬಿಸಿಲ್ಲ: ಡಿಎಂಕೆ ನಾಯಕನ ಸ್ಫೋಟಕ ಹೇಳಿಕೆ

ಪಿಟಿಐ
Published 12 ಫೆಬ್ರುವರಿ 2026, 7:03 IST
Last Updated 12 ಫೆಬ್ರುವರಿ 2026, 7:03 IST
<div class="paragraphs"><p>ತಮಿಳುನಾಡಿನ ಡಿಎಂಕೆ ನಾಯಕರು</p></div>

ತಮಿಳುನಾಡಿನ ಡಿಎಂಕೆ ನಾಯಕರು

   

ಮಧುರೈ: ಡಿಎಂಕೆ ಪಕ್ಷ ಯಾವುದೇ ಮೈತ್ರಿಯನ್ನು ಅವಲಂಬಿಸಿಕೊಂಡು ತನ್ನ ರಾಜಕೀಯ ಚಟುವಟಿಕೆಯನ್ನು ನಡೆಸುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕ ಆರ್.ಎಸ್. ರಾಜಕಣ್ಣಪ್ಪನ್ ಅವರು ಕಾಂಗ್ರೆಸ್ ಜೊತೆಗಿನ ಪಕ್ಷದ ಜೊತೆಗಿನ ಮೈತ್ರಿ ಅವಲಂಬನೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಕುರಿತು ಸಿಎಂ ಸ್ಟಾಲಿನ್ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಪಕ್ಷದ ಮನೋಭಾವನೆ ಉಳಿದಿದೆ. ‘ಅವರು ಬಂದರೆ ಬರಲಿ, ಹೋಗುವುದಾದರೆ ಹೋಗಲಿ’ ಎಂದು ಬುಧವಾರದಂದು ತಮಿಳುನಾಡು ಅರಣ್ಯ ಮತ್ತು ಖಾದಿ ಸಚಿವ ರಾಜಕಣ್ಣಪ್ಪನ್ ತಿಳಿಸಿದ್ದಾರೆ.

ADVERTISEMENT

ಅದ್ಯಾಗ್ಯೂ, ಮೈತ್ರಿಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ‘ಮುಖ್ಯಮಂತ್ರಿ ಸ್ಟಾಲಿನ್ ಅವರ ಆದ್ಯತೆಗೆ ಬಿಟ್ಟ ವಿಚಾರ ಎಂದು ಕಣ್ಣಪ್ಪನ್ ಒತ್ತಿ ಹೇಳಿದ್ದಾರೆ.

ತಮಿಳುನಾಡು ಅರಣ್ಯ ಮತ್ತು ಖಾದಿ ಸಚಿವ ರಾಜಕಣ್ಣಪ್ಪನ್

ಇನ್ನೂ ಎಐಎಡಿಎಂಕೆ ಬಳಿ ಶಕ್ತಿ ಇಲ್ಲ ಎಂದು ಅವರು ತಿಳಿಸಿದರು.

‘ಬಿಜೆಪಿ ಅವರು ಕುನ್ನಕುಡಿಗೆ ಅನ್ನಕಾವಡಿ (ಸಾಂಪ್ರದಾಯಿಕ ಆಚರಣೆಯ ಕಾಣಿಕೆ) ತೆಗೆದುಕೊಂಡು ಹೋದರೂ ಇಲ್ಲಿ ನೆಲೆಯೂರಲು ಸಾಧ್ಯವಿಲ್ಲ. ಎಐಎಡಿಎಂಕೆ ಒಂದು ಕಾಲದಲ್ಲಿ ಅಸ್ತಿತ್ವದಲ್ಲಿತ್ತು. ಆದರೆ ಅದು ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಕೊನೆಗೊಂಡಿತು’ ಎಂದು ರಾಜಕನ್ನಪ್ಪನ್ ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.