ADVERTISEMENT

ಪ್ರಧಾನಿ ಮೋದಿಗೆ ಕರೆ ಮಾಡಿ ದೀಪಾವಳಿ ಶುಭಾಶಯ ತಿಳಿಸಿದ ಡೊನಾಲ್ಡ್ ಟ್ರಂಪ್

ಪಿಟಿಐ
Published 22 ಅಕ್ಟೋಬರ್ 2025, 9:38 IST
Last Updated 22 ಅಕ್ಟೋಬರ್ 2025, 9:38 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದ ಚಿತ್ರ   

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋನ್ ಕರೆ ಮಾಡಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಭಾರತ ಹಾಗೂ ಅಮೆರಿಕ ಸೇರಿ ಜಗತ್ತನ್ನು ವಿಶ್ವಾಸದಿಂದ ಬೆಳಗುವ ಹಾಗೂ ಎಲ್ಲಾ ರೀತಿಯ ಭಯೋತ್ಪಾದನೆಗಳ ವಿರುದ್ಧ ನಿಲ್ಲುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ರಷ್ಯಾದೊಂದಿಗೆ ತೈಲ ಖರೀದಿ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾಗಿ ಟ್ರಂಪ್ ಹೇಳಿದ್ದರು. ಅಂತಹ ಸಂಭಾಷಣೆ ನಡೆದಿಲ್ಲ ಎಂದು ಭಾರತ ಹೇಳಿತ್ತು. ಈ ಘಟನೆಯ ಬಳಿಕ ಟ್ರಂಪ್ ಅವರ ಮೊದಲ ಫೋನ್ ಕರೆ ಇದು.

‘ಫೋನ್ ಕರೆ ಹಾಗೂ ಮಮತೆಯ ದೀಪಾವಳಿ ಶುಭಾಶಯ ಕೋರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು. ಬೆಳಕಿನ ಹಬ್ಬದ ಈ ಸಂದರ್ಭದಲ್ಲಿ ಎರಡು ಮಹಾನ್ ಪ್ರಜಾಪ್ರಭುತ್ವಗಳು ಸೇರಿ ಜಗತ್ತನ್ನು ಭರವಸೆಯಿಂದ ಬೆಳಗುವುದನ್ನು ಹಾಗೂ ಎಲ್ಲಾ ಮಾದರಿಯ ಭಯೋತ್ಪಾದನೆಯ ವಿರುದ್ಧ ಒಟ್ಟು ನಿಲ್ಲುವುದು ಮುಂದುವರಿಯಲಿ’ ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ADVERTISEMENT

ಪಾಕಿಸ್ತಾನದ ಯಾವುದೇ ವಿಚಾರ ಈ ವೇಳೆ ಪ್ರಸ್ತಾಪವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 16ರ ಬಳಿಕ ಸಾರ್ವಜನಿಕವಾಗಿ ತಿಳಿದಿರುವ ಟ್ರಂಪ್ ಹಾಗೂ ಮೋದಿಯವರ ನಡುವಿನ ಮೂರನೇ ಫೋನ್ ಕರೆ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.