ADVERTISEMENT

ಪ್ರಸಿದ್ಧ ತಾಜ್ ಮಹಲ್‌‌ಗೆ ಟ್ರಂಪ್ ಭೇಟಿ: ಸ್ವಾಗತ ಕೋರಲು ಯೋಗಿ ಆದಿತ್ಯನಾಥ್ ಸಿದ್ಧ

ಏಜೆನ್ಸೀಸ್
Published 22 ಫೆಬ್ರುವರಿ 2020, 13:19 IST
Last Updated 22 ಫೆಬ್ರುವರಿ 2020, 13:19 IST
ತಾಜ್ ಮಹಲ್‌‌ಗೆ ಟ್ರಂಪ್ ಭೇಟಿ ಸ್ವಾಗತ ಕೋರಲು ಯೋಗಿ ಆದಿತ್ಯನಾಥ್ ಸಿದ್ಧ
ತಾಜ್ ಮಹಲ್‌‌ಗೆ ಟ್ರಂಪ್ ಭೇಟಿ ಸ್ವಾಗತ ಕೋರಲು ಯೋಗಿ ಆದಿತ್ಯನಾಥ್ ಸಿದ್ಧ   
""

ಲಖನೌ (ಉತ್ತರ ಪ್ರದೇಶ): ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಸ್ಮಾರಕಕ್ಕೂ ಭೇಟಿ ನೀಡುವುದರಿಂದ ಇದೇ 24ರಂದು ಸ್ಮಾರಕಕ್ಕೆ ಸಾರ್ವಜನಿಕರಪ್ರವೇಶ ನಿರ್ಬಂಧಿಸಲಾಗಿದೆ.

ಅಂದು ಟ್ರಂಪ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದು, ಆಗ್ರಾದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತ ಕೋರಲಿದ್ದಾರೆ.ಇವರ ಜೊತೆ ಆಗ್ರಾ ಮೇಯರ್ ನವೀನ್ ಕೆ ಜೈನ್ ಸ್ವಾಗತಿಸಲಿದ್ದಾರೆ ಎಂದು ಎಎನ್ ಐ ವರದಿ ತಿಳಿಸಿದೆ.

ಈಗಾಗಲೆ ಇಬ್ಬರ ಹೆಸರನ್ನು ಅಮೆರಿಕಾ ಅಧ್ಯಕ್ಷರ ಭದ್ರತಾ ಪಡೆಗೆ ನೀಡಲಾಗಿದ್ದು, ಅಂತಿಮಗೊಳಿಸಲಾಗಿದೆ. ಅಂದು ಮೇಯರ್ ನವೀನ್ ಕೆ ಜೈನ್ ಅತಿಥಿ ಸತ್ಕಾರದ ಕೀಯನ್ನು ಸಾಂಕೇತಿಕವಾಗಿಟ್ರಂಪ್ ಅವರಿಗೆ ಹಸ್ತಾಂತರಿಸಲಿದ್ದಾರೆ.ಈ ವೇಳೆ ಟ್ರಂಪ್ ಅವರ ಪತ್ನಿ ಮೆಲನಿಯಾ, ಪುತ್ರಿ ಇವಾಂಕಾ, ಟ್ರಂಪ್ ಅಳಿಯಜೇರ್ಡ್ ಕುಷನರ್ ಹಾಗೂ ವೈಟ್ ಹೌಸ್‌‌ನ ಅಧ್ಯಕ್ಷರ ಅಧಿಕಾರಿಗಳ ತಂಡ ಭೇಟಿ ನೀಡಲಿದ್ದಾರೆ.

ADVERTISEMENT

ಈಗಾಗಲೆ ಟ್ರಂಪ್ಸ್ವಾಗತಕ್ಕೆ ಆಗ್ರಾ ಸಿಂಗರಿಸಲ್ಪಟ್ಟಿದ್ದು,ವಿಮಾನನಿಲ್ದಾಣದಿಂದ ತಾಜಮಹಲ್ ತಲುಪುವವರೆಗೆ 'ನಮಸ್ತೆ ಟ್ರಂಪ್' ಎಂಬ ನಾಮಫಲಕಗಳು ಹಾಗೂ ಅಮೆರಿಕಾದ ರಾಷ್ಟ್ರಧ್ವಜ ರಾರಾಜಿಸುತ್ತಿವೆ.

ಭಾರತೀಯ ಪುರಾತತ್ವ ಇಲಾಖೆಮೂಲಗಳ ಪ್ರಕಾರ, ಅಂದು ತಾಜ್‌‌ ಮಹಲ್‌ಗೆ ಬೆಳಿಗ್ಗೆ 12ರಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಎಎನ್ ಐ ವರದಿ ತಿಳಿಸಿದೆ.ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.