ADVERTISEMENT

ಕೇರಳಕ್ಕೆ ಸಿಬಿಐ, ಇ.ಡಿ ಬಂದಾಗ ಹೆದರಬೇಡಿ: ಕೇಂದ್ರ ಸಚಿವ ಸುರೇಶ್‌ ಗೋಪಿ

ಪಿಟಿಐ
Published 4 ಡಿಸೆಂಬರ್ 2025, 9:49 IST
Last Updated 4 ಡಿಸೆಂಬರ್ 2025, 9:49 IST
<div class="paragraphs"><p>ಸುರೇಶ್‌ ಗೋಪಿ</p></div>

ಸುರೇಶ್‌ ಗೋಪಿ

   

ಕೊಲ್ಲಂ(ಕೇರಳ): ಕೆಐಐಎಫ್‌ಬಿ ಮಸಾಲಾ ಬಾಂಡ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ಶೀಘ್ರದಲ್ಲೇ ಕೇರಳಕ್ಕೆ ಬರಲಿದ್ದು, ಹೆದರುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾರ ಹೇಳಿದ್ದಾರೆ.

ಇಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ವೇಳೆ ಶಬರಿಮಲೆ ಚಿನ್ನ ಕಳವು ಪ್ರಕರಣ ಮತ್ತು ರಾಹುಲ್ ಮಾಂಕೂಟತ್ತಿಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮಾತನಾಡುವುದು ಬೇಡ. ಅವುಗಳನ್ನು ನೋಡಿಕೊಳ್ಳಲು ಕಾನೂನು ಮತ್ತು ಪೊಲೀಸ್ ಇದೆ. ಇದರ ಹೊರತಾಗಿ ತನಿಖೆ ನಡೆಸಲು ಸಿಬಿಐ, ಇ.ಡಿ, ಎನ್‌ಐಎ ರಾಜ್ಯಕ್ಕೆ ಬರಲಿವೆ. ಆ ಸಮಯದಲ್ಲಿ ಯಾರು ಹೆದರಬೇಡಿ’ ಎಂದು ಹೇಳಿದ್ದಾರೆ.

ADVERTISEMENT

‘ಬಿಜೆಪಿಗೆ ಮತ ಹಾಕುವುದರಿಂದ ಕೇರಳದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಗತಿಗೆ ಹೇಗೆ ಸಹಾಯವಾಗುತ್ತದೆ ಎಂಬುದು ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಸಮಯದಲ್ಲಿ ಚರ್ಚೆಯ ವಿಷಯಗಳಾಗಿರಬೇಕು’ ಎಂದು ಅವರು ಕಾರ್ಯಕರ್ತರಿಗೆ ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ರಾಜ್ಯದ ಸ್ಪರ್ಧಿಗಳು ಭಾಗವಹಿಸಿ ದೇಶಕ್ಕೆ ಪದಕ ತಂದುಕೊಡಬೇಕು. ಇದಾಗ ಬೇಕಾದರೆ ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಬೇಕು. ಅದಕ್ಕಾಗಿ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದು ಅಗತ್ಯ’ ಎಂದಿದ್ದಾರೆ.

ಏನತಧ್ಯೆ, ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌,  ಮಾಜಿ ಹಣಕಾಸು ಸಚಿವ ಥಾಮಸ್‌ ಐಸಾಕ್ ಮತ್ತು ಅಧಿಕಾರಿಯೊಬ್ಬರಿಗೆ ಜಾರಿ ನಿರ್ದೇಶನಾಲಯ ಷೋಕಾಸ್‌ ನೋಟಿಸ್‌ ನೀಡಿದೆ.

₹466.91 ಕೋಟಿ ನಿಧಿಗೆ ಸಂಬಂಧಿಸಿ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ(ಕೆಐಐಎಫ್‌ಬಿ) ಮತ್ತು ಅದರ ಅಧಿಕಾರಿಗಳು ಎಫ್ಇಎಂಎ ನಿಬಂಧನೆಗಳು ಮತ್ತು ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.