ADVERTISEMENT

ಡಿಆರ್‌ಡಿಒ ಮುಖ್ಯಸ್ಥ ಸಮೀರ್‌ ಸೇವಾವಧಿ ವಿಸ್ತರಣೆ

ಪಿಟಿಐ
Published 26 ಮೇ 2025, 16:17 IST
Last Updated 26 ಮೇ 2025, 16:17 IST
ಸಮೀರ್‌ ವಿ.ಕಾಮತ್‌–ಟ್ವಿಟರ್‌ ಚಿತ್ರ
ಸಮೀರ್‌ ವಿ.ಕಾಮತ್‌–ಟ್ವಿಟರ್‌ ಚಿತ್ರ   

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮುಖ್ಯಸ್ಥ ಸಮೀರ್‌ ವಿ.ಕಾಮತ್‌ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರವು ಇನ್ನೊಂದು ವರ್ಷ ವಿಸ್ತರಿಸಿದೆ.

‘ಸಮೀರ್‌ ಅವರ ಸೇವಾವಧಿಯನ್ನು 2026ರ ಮೇ 31ರವರೆಗೆ ವಿಸ್ತರಿಸಲು ಸಚಿವ ಸಂಪುಟದ ನೇಮಕಾತಿ ಸಮಿತಿಯು ಒಪ್ಪಿಗೆ ನೀಡಿದೆ’ ಎಂದು ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಸಮೀರ್‌ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದ್ದು ಇದು ಎರಡನೇ ಬಾರಿ. ಕಳೆದ ವರ್ಷ ಮೇ 27ರಂದು ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. 

ADVERTISEMENT

ಪ್ರಸಿದ್ಧ ವಿಜ್ಞಾನಿಯಾಗಿರುವ ಕಾಮತ್‌ ಅವರು 2022ರ ಆಗಸ್ಟ್‌ 25ರಿಂದ ಡಿಆರ್‌ಡಿಒ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.