ADVERTISEMENT

ಹಿಂದೂಗಳ ಆಗಮನಕ್ಕೂ ಮುನ್ನ ಭಾರತದಲ್ಲಿ ಎಲ್ಲರೂ ಬೌದ್ಧರಾಗಿದ್ದರು: ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 14:35 IST
Last Updated 26 ಡಿಸೆಂಬರ್ 2019, 14:35 IST
   

ಮುಂಬೈ: ‘ದೇಶದ 130 ಕೋಟಿ ಜನರೂ ಹಿಂದೂಗಳು,’ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಮದಾಸ ಅಟವಾಳೆ,‘ಭಾರತಕ್ಕೆ ಹಿಂದೂಗಳ ಆಗಮನವಾಗುವುದಕ್ಕೂ ಮೊದಲು ಇಲ್ಲಿ ಎಲ್ಲರೂ ಬೌದ್ಧ ಧರ್ಮದವರಾಗಿದ್ದರು. ಭಾರತದಲ್ಲಿರುವವರೆಲ್ಲರೂ ಹಿಂದೂಗಳು ಎಂಬ ನಿಲುವು ಸರಿಯಲ್ಲ,’ ಎಂದಿದ್ದಾರೆ.

‘ಎಲ್ಲರೂ ಹಿಂದೂಗಳು ಎನ್ನುವುದು ಸರಿಯಲ್ಲ. ಒಂದು ಕಾಲಘಟ್ಟದಲ್ಲಿ ಇಲ್ಲಿ ಎಲ್ಲರೂ ಬೌದ್ಧರಾಗಿದ್ದರು. ಯಾವಾಗ ಹಿಂದುತ್ವ ಭಾರತಕ್ಕೆ ಬಂತೋ ಆಗಿಂದಲೂ ಇದು ಹಿಂದೂ ರಾಷ್ಟ್ರವಾಗಿದೆ. ಎಲ್ಲರೂ ನಮ್ಮರೇ ಎಂಬುದು ಅವರ ಭಾವನೆಯಾಗಿದ್ದರೆ ಸರಿ,’ ಎಂದು ಅವರು ಹೇಳಿದ್ದಾರೆ.

‘ಧರ್ಮ ಮತ್ತು ಸಂಸ್ಕೃತಿಯನ್ನೂ ಮೀರಿ ಯಾರೆಲ್ಲರೂ ರಾಷ್ಟ್ರೀಯತೆಯ ನಿಲುವು ಹೊಂದಿದ್ದಾರೋ, ಈ ದೇಶದ ಸಂಸ್ಕೃತಿ, ಪರಂಪರೆಯನ್ನು ಗೌರವಿಸುತ್ತಾರೋ ಅವರೆಲ್ಲರೂ ಹಿಂದೂಗಳೇ. ಮತ್ತು, ಈ ದೇಶದ 130 ಕೋಟಿ ಜನರೂ ಹಿಂದೂಗಳೇ,’ ಎಂದು ಮೋಹನ್‌ ಭಾಗವತ್‌ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ADVERTISEMENT

‘ ಈ ಇಡೀ ಸಮಾಜವೇ ನಮ್ಮದು. ಸಂಘವು ಸಮಾಜದಲ್ಲಿ ಒಗ್ಗಟ್ಟು ಸೃಷ್ಟಿಸುತ್ತದೆ,’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.