ADVERTISEMENT

ಫೆಮಾ ಉಲ್ಲಂಘನೆ ಆರೋಪ; ಬಿಬಿಸಿ ವಿರುದ್ಧ ಇ.ಡಿ ಪ್ರಕರಣ

ಪಿಟಿಐ
Published 13 ಏಪ್ರಿಲ್ 2023, 6:44 IST
Last Updated 13 ಏಪ್ರಿಲ್ 2023, 6:44 IST
   

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಲ್ಲಿ ಬಿಬಿಸಿ ಇಂಡಿಯಾ ಸುದ್ದಿ ವಾಹಿನಿಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡಿದೆ.

ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಉಲ್ಲಂಘನೆಯನ್ನು ಇ.ಡಿ ಪರಿಶೀಲಿಸುತ್ತಿದೆ. ವಿದೇಶಿ ವಿನಿಮಯ ಉಲ್ಲಂಘನೆ ಆರೋಪಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಹೇಳಿಕೆ ನೀಡುವಂತೆ ಬಿಬಿಸಿಗೆ ಹೇಳಿದೆ.

ಫೆಬ್ರುವರಿ ತಿಂಗಳಲ್ಲಿ ಬಿಬಿಸಿ ಸಂಸ್ಥೆಯ ದೆಹಲಿಯ ಕಚೇರಿಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.