ADVERTISEMENT

ಬೆಟ್ಟಿಂಗ್: ಕ್ರಿಕೆಟಿಗರು, ಸೆಲೆಬ್ರಿಟಿಗಳ ಆಸ್ತಿ ಮುಟ್ಟುಗೋಲಿಗೆ ಇ.ಡಿ. ಸಜ್ಜು

ಪಿಟಿಐ
Published 28 ಸೆಪ್ಟೆಂಬರ್ 2025, 10:31 IST
Last Updated 28 ಸೆಪ್ಟೆಂಬರ್ 2025, 10:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೆಲವು ಕ್ರಿಕೆಟಿಗರು, ಸೆಲೆಬ್ರಿಟಿಗಳಿಗೆ ಸೇರಿದ ಕೋಟ್ಯಂತರ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶೀಘ್ರದಲ್ಲೇ ಮುಟ್ಟುಗೋಲು ಹಾಕಿಕೊಳ್ಳಲಿದೆ ಎನ್ನಲಾಗಿದೆ.

'1xBet' ಪೋರ್ಟಲ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ವೇಳೆ, ಹಲವು ಸೆಲೆಬ್ರಿಟಿಗಳು ತಮಗೆ ಪಾವತಿಸಲಾಗಿರುವ ಹಣವನ್ನು ವಿವಿಧೆಡೆ ಆಸ್ತಿ ಖರೀದಿಸಲು ಬಳಸಿರುವುದು ಪತ್ತೆಯಾಗಿದೆ. ಈ ಹಣವು, ಪಿಎಂಎಲ್‌ಎ ಅಡಿಯಲ್ಲಿ 'ಅಪರಾಧದ ಆದಾಯ'ವಾಗಿದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ವಿದೇಶಗಳಲ್ಲಿರುವ ಆಸ್ತಿಯೂ ಸೇರಿದಂತೆ ದೇಶದಲ್ಲಿನ ಸ್ಥಿರ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತನಿಖಾ ಸಂಸ್ಥೆಯು ಶೀಘ್ರದಲ್ಲೇ ಪಿಎಂಎಲ್‌ಎ ಅಡಿ ತಾತ್ಕಾಲಿಕ ಜಪ್ತಿ ಆದೇಶ ಹೊರಡಿಸುವ ನಿರೀಕ್ಷೆಯಿದೆ.

ಇ.ಡಿ., ಕ್ರಿಕೆಟಿಗರಾದ ಯುವರಾಜ್ ಸಿಂಗ್‌, ಸುರೇಶ್‌ ರೈನಾ, ರಾಬಿನ್‌ ಉತ್ತಪ್ಪ, ಶಿಖರ್‌ ಧವನ್‌, ನಟರಾದ ಸೋನು ಸೂದ್‌, ಮಿಮಿ ಚಕ್ರವರ್ತಿ, ಅಂಕುಶ್‌ ಹಝ್ರಾ ಸೇರಿದಂತೆ ಹಲವರನ್ನು ಕಳೆದ ಕೆಲವು ವಾರಗಳಿಂದ ವಿಚಾರಣೆಗೊಳಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.