ADVERTISEMENT

ರಾಹುಲ್ ಗಾಂಧಿ ಅವರ ಗಂಭೀರವಾದ ಪ್ರಶ್ನೆಗಳಿಗೆ ಆಯೋಗ ಉತ್ತರ ನೀಡಬೇಕಿದೆ: ತರೂರ್

ಪಿಟಿಐ
Published 11 ಆಗಸ್ಟ್ 2025, 12:50 IST
Last Updated 11 ಆಗಸ್ಟ್ 2025, 12:50 IST
<div class="paragraphs"><p>ಶಶಿ ತರೂರ್</p></div>

ಶಶಿ ತರೂರ್

   

(ಪಿಟಿಐ ಚಿತ್ರ)

ನವದೆಹಲಿ: 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗಕ್ಕೆ ಹಲವು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಆಯೋಗವು ಗಂಭೀರವಾದ ಉತ್ತರಗಳನ್ನು ನೀಡಬೇಕಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಇಂದು (ಸೋಮವಾರ) ಹೇಳಿದ್ದಾರೆ.

ADVERTISEMENT

'ಚುನಾವಣಾ ಆಯೋಗವು ಇಲ್ಲಿಯವರೆಗೆ ನೀಡಿದ ಉತ್ತರಗಳು ಔಪಚಾರಿಕತೆಯಂತೆ ಕಾಣಿಸುತ್ತಿವೆ. ಇದರ ಬದಲು ಚುನಾವಣಾ ಆಯೋಗವು ಕಳವಳಗಳನ್ನು ನಿವಾರಿಸಬೇಕಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅಂಕಿಅಂಶವನ್ನು ಪಾರದರ್ಶಕವಾಗಿ ಹಂಚಿಕೊಳ್ಳಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಸಂಸದರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ತರೂರ್, 'ರಾಹುಲ್ ಗಾಂಧಿ ಆರೋಪ ಮಾಡಿರುವ ಅಂಕಿಅಂಶವು ಆಯೋಗದ್ದಾಗಿದೆ. ಆಯೋಗವು ತನ್ನದೇ ಅಂಕಿಅಂಶವನ್ನು ಪರಿಶೀಲಿಸಬೇಕಿದೆ' ಎಂದು ಹೇಳಿದ್ದಾರೆ.

'ಔಪಚಾರಿಕವಾಗಿ ಉತ್ತರಿಸುವ ಬದಲು ಜನರ ಮನಸ್ಸಿನಲ್ಲಿ ಎದ್ದಿರುವ ಗಂಭೀರವಾದ ಸಂದೇಹಗಳನ್ನು ಬಗೆಹರಿಸಬೇಕಿದೆ. ಏಕೆಂದರೆ ಚುನಾವಣಾ ವ್ಯವಸ್ಥೆಯ ಸಮಗ್ರತೆ, ವಿಶ್ವಾಸಾರ್ಹತೆ ಭಾರತದ ಪ್ರಜಾಪ್ರಭುತ್ವದ ಪಾಲಿಗೆ ಮಹತ್ವದ್ದಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಮತ ಕಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮೇಲೆ ಆಯೋಗ ದಾಳಿ ನಡೆಸುತ್ತಿದೆಯೇ ಎಂದು ಕೇಳಿದಾಗ, ನಮಗೆ ಉತ್ತರ ಸಿಗಬೇಕಿದೆ. ದಾಳಿಯಲ್ಲ' ಎಂದು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.