ADVERTISEMENT

ಇವಿಎಂ ದುರ್ಬಳಕೆ ಅಸಾಧ್ಯ: ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ

ಪಿಟಿಐ
Published 7 ಜನವರಿ 2019, 12:59 IST
Last Updated 7 ಜನವರಿ 2019, 12:59 IST
ಸುನಿಲ್‌ ಅರೋರ
ಸುನಿಲ್‌ ಅರೋರ   

ಚಂಡೀಗಡ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ತಿರುಚಲು ಅಥವಾ ಅಕ್ರಮವೆಸಗಲು ಸಾಧ್ಯವಾಗದಂತಹ ವ್ಯವಸ್ಥೆ ಹೊಂದಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ಪರಿಣತರ ಸಮಿತಿ ನೋಡಿಕೊಳ್ಳುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ ಸೋಮವಾರ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಪಿಜಿಐಎಂಇಆರ್‌) ಸ್ನಾತಕೋತ್ತರ ಪದವಿ ವಿಭಾಗದ ಹೊಸ ಶೈಕ್ಷಣಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಇವಿಎಂ ವ್ಯವಸ್ಥೆ ಯಾವುದೇ ಸಂಶಯಕ್ಕೆ ಎಡೆಮಾಡಿಕೊಡದ ರೀತಿಯಲ್ಲಿ ಪರಿಪೂರ್ಣವಾಗಿದೆ. ಅತ್ಯುನ್ನತವಾದ ತಾಂತ್ರಿಕ ಪರಿಣತರ ಸಮಿತಿ ಅವುಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ ಎಂದರು.

ADVERTISEMENT

ಎವಿಎಂಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಹಲವಾರು ರಾಜಕೀಯ ಪಕ್ಷಗಳು ಇತ್ತೀಚೆಗೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಂದ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.