ADVERTISEMENT

Exit Poll 2023| ತ್ರಿಪುರ, ನಾಗಾಲ್ಯಾಂಡ್ ಗೆಲ್ಲಲಿದೆ ಬಿಜೆಪಿ: ಮತಗಟ್ಟೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 1:47 IST
Last Updated 2 ಮಾರ್ಚ್ 2023, 1:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆಯನ್ನು ಸಮೀಕ್ಷೆಗಳು ನೀಡಿವೆ. ಮುಖ್ಯಮಂತ್ರಿ ಕಾನ್ರಾಡ್‌ ಕೆ. ಸಂಗ್ಮಾ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹುಮ್ಮುವ ಸಾಧ್ಯತೆಗಳು ಕಾಣಿಸಿವೆ.

ಇನ್ನೊಂದೆಡೆ ಕಾಂಗ್ರೆಸ್‌ ಈ ಚುನಾವಣೆಗಳಲ್ಲೂ ಸೋಲು ಕಾಣುವ ಬಗ್ಗೆ ಸಮೀಕ್ಷೆಗಳು ಹೇಳುತ್ತಿವೆ.

ADVERTISEMENT

ಫೆಬ್ರುವರಿ 6ರಂದು ತ್ರಿಪುರ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿತ್ತು. ನಂತರ, ಫೆಬ್ರುವರಿ 27 ರಂದು ಉಳಿದ ಎರಡು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯಕ್ಕೆ ಮತದಾನ ನಡೆದಿದೆ. ಮೂರೂ ರಾಜ್ಯಗಳ ಚುನಾವಣೆ ಫಲಿತಾಂಶ ಮಾರ್ಚ್ 2 ರಂದು ಹೊರಬೀಳಲಿವೆ.

ಸದ್ಯದ ಸ್ಥಿತಿ

– ತ್ರಿಪುರದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿ ಕೂಟದ ಸರ್ಕಾರ ಅಸ್ತಿತ್ವದಲ್ಲಿದೆ. ಬಿಜೆಪಿಯ ಮಾಣಿಕ್‌ ಶಾ ಮುಖ್ಯಮಂತ್ರಿಯಾಗಿದ್ದಾರೆ.

– ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿ ಕೂಟ ಅಧಿಕಾರದಲ್ಲಿದ್ದು, ಎನ್‌ಡಿಪಿಪಿಯ ನೀಫಿಯು ರಿಯೊ ಮುಖ್ಯಮಂತ್ರಿಯಾಗಿದ್ದಾರೆ.

– ಮೇಘಾಲಯದಲ್ಲಿ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ. ಸಂಗ್ಮಾ ಅವರು ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದಲ್ಲಿ ಸರ್ಕಾರ ರಚಿಸಿದ್ದಾರೆ. ಬಿಜೆಪಿ, ಈ ಮೈತ್ರಿಕೂಟದ ಕಿರಿಯ ಪಾಲುದಾರ ಪಕ್ಷವಾಗಿತ್ತು. ಯುಡಿಎಫ್, ಪಿಡಿಎಫ್, ಎಚ್‌ಎಸ್‌ಪಿಡಿಪಿ ಶಾಸಕರು ಹಾಗೂ ಪಕ್ಷೇತರರು ಸಂಗ್ಮಾ ಸರ್ಕಾರವನ್ನು ಬೆಂಬಲಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯೂ ಸೇರಿದಂತೆ ಪಾಲುದಾರ ಪಕ್ಷಗಳೆಲ್ಲವೂ ಪ್ರತ್ಯೇಕವಾಗಿಯೇ ಸ್ಪರ್ಧೆ ಮಾಡಿವೆ.

59 ಕ್ಷೇತ್ರಗಳಿಗಷ್ಟೇ ಮತದಾನ

60 ಕ್ಷೇತ್ರಗಳಿರುವ ನಾಗಾಲ್ಯಾಂಡ್‌ ಮತ್ತು ಮೇಘಾಲಯದ ತಲಾ 59 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಲಿದೆ. ನಾಗಾಲ್ಯಾಂಡ್‌ನ ಕ್ಷೇತ್ರವೊಂದರಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡ ಕಾರಣ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಘಾಲಯದ ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

ಮೇಘಾಲಯ- 59 (ಬಹುಮತ – 31)

ಇಂಡಿಯಾ ಟುಡೆ – ಆಕ್ಸಿಸ್‌ ಇಂಡಿಯಾ
ಬಿಜೆಪಿ 4–8
ಕಾಂಗ್ರೆಸ್‌ 6–12
ಎನ್‌ಪಿಪಿ 18–24

ಟೈಮ್ಸ್‌ ನೌ – ಇಟಿಜಿ ರಿಸರ್ಚ್‌
ಬಿಜೆಪಿ 3–6
ಕಾಂಗ್ರೆಸ್‌ 2–5
ಎನ್‌ಪಿಪಿ 18–26

ಜೀ ನ್ಯೂಸ್‌ – ಮ್ಯಾಟ್ರಿಜ್‌
ಬಿಜೆಪಿ 6–11
ಕಾಂಗ್ರೆಸ್‌ 3–6
ಎನ್‌ಪಿಪಿ 21–26

ನಾಗಾಲ್ಯಾಂಡ್‌ 59 (ಬಹುಮತ – 31)

ಇಂಡಿಯಾ ಟುಡೆ – ಆಕ್ಸಿಸ್‌ ಇಂಡಿಯಾ
ಬಿಜೆಪಿ+ಎನ್‌ಡಿಪಿಪಿ 38–48
ಕಾಂಗ್ರೆಸ್‌ 1–2
ಎನ್‌ಪಿಎಫ್‌ 3–8

ಟೈಮ್ಸ್‌ ನೌ – ಇಟಿಜಿ ರಿಸರ್ಚ್‌
ಬಿಜೆಪಿ+ಎನ್‌ಡಿಪಿಪಿ 39–49
ಕಾಂಗ್ರೆಸ್‌ – 0
ಎನ್‌ಪಿಎಫ್‌ 4–8

ಜೀ ನ್ಯೂಸ್‌ – ಮ್ಯಾಟ್ರಿಜ್‌
ಬಿಜೆಪಿ 35–43
ಕಾಂಗ್ರೆಸ್‌ 1–3
ಎನ್‌ಪಿಎಫ್‌ 2–5

ತ್ರಿಪುರ 60 (ಬಹುಮತ – 31)

ಇಂಡಿಯಾ ಟುಡೆ – ಆಕ್ಸಿಸ್‌ ಇಂಡಿಯಾ
ಬಿಜೆಪಿ ಮೈತ್ರಿಕೂಟ 36–45
ಕಾಂಗ್ರೆಸ್‌ 0
ಎಡಪಕ್ಷಗಳು 6–11

ಟೈಮ್ಸ್‌ ನೌ– ಇಟಿಜಿ ರಿಸರ್ಚ್‌
ಬಿಜೆಪಿ ಮೈತ್ರಿಕೂಟ 21–27
ಕಾಂಗ್ರೆಸ್‌ 0
ಎಡಪಕ್ಷಗಳು 18–24

ಜೀ ನ್ಯೂಸ್‌ – ಮ್ಯಾಟ್ರಿಜ್‌
ಬಿಜೆಪಿ ಮೈತ್ರಿಕೂಟ 29–36
ಕಾಂಗ್ರೆಸ್‌ 0
ಎಡಪಕ್ಷಗಳು 13–21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.