ADVERTISEMENT

ನೇಪಾಳ: ನಕಲಿ ಭಾರತೀಯ ನೋಟುಗಳನ್ನು ಹೊಂದಿದ್ದ ಬಿಹಾರದ ಇಬ್ಬರ ಬಂಧನ

ಪಿಟಿಐ
Published 28 ಜನವರಿ 2026, 13:14 IST
Last Updated 28 ಜನವರಿ 2026, 13:14 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕಠ್ಮಂಡು: ನಕಲಿ ಭಾರತೀಯ ನೋಟುಗಳನ್ನು ಹೊಂದಿದ್ದ ಇಬ್ಬರು ಬಿಹಾರದ ವ್ಯಕ್ತಿಗಳನ್ನು ನೇಪಾಳದ ರೌತಹಟ್‌ ಜಿಲ್ಲೆಯಲ್ಲಿ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯ ವಿಕ್ರಮ್‌ ಕುಮಾರ್‌ ಪಾಸ್ವಾನ್‌ (30) ಮತ್ತು ರಾಹೇಶ್‌ ಕುಮಾರ್‌ ಸಾಹ (42) ಬಂಧಿತರು. ಅವರು ₹500 ಮುಖಬೆಲೆಯ ಒಂದು ನೋಟು ಮತ್ತು ₹200 ಮುಖಬೆಲೆಯ 10 ನಕಲಿ ಭಾರತೀಯ ನೋಟುಗಳೊಂದಿಗೆ ಭಾರತೀಯ ನೋಂದಾಯಿತ ಮೋಟಾರ್‌ ಬೈಕ್‌ನಲ್ಲಿ ನೇಪಾಳವನ್ನು ಪ್ರವೇಶಿಸುವಾಗ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸಶಸ್ತ್ರ ಪೊಲೀಸ್‌ ಪಡೆಯ ವಕ್ತಾರ ಮನೀಶ್‌ ಥಾಪಾ ಅವರು ಬುಧವಾರ ತಿಳಿಸಿದ್ದಾರೆ.

ADVERTISEMENT

ಶಂಕಿತರನ್ನು ರೌತಹಟ್‌ ಜಿಲ್ಲಾ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.