ADVERTISEMENT

Farmers Protest: ರೈತರಿಗೆ ಗಾಯ, ಪಾದಯಾತ್ರೆ ಸ್ಥಗಿತ

ಪಿಟಿಐ
Published 8 ಡಿಸೆಂಬರ್ 2024, 11:20 IST
Last Updated 8 ಡಿಸೆಂಬರ್ 2024, 11:20 IST
<div class="paragraphs"><p>ರೈತರ ಪ್ರತಿಭಟನೆ</p></div>

ರೈತರ ಪ್ರತಿಭಟನೆ

   

(ಪಿಟಿಐ ಚಿತ್ರ)

ಶಂಭು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ದೆಹಲಿಗೆ ಪಾದಯಾತ್ರೆ ನಡೆಸುತ್ತಿರುವ ರೈತರು, ತಾತ್ಕಾಲಿಕವಾಗಿ ದಿನದ ಮಟ್ಟಿಗೆ ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.

ADVERTISEMENT

ಪಂಜಾಬ್‌ ಹಾಗೂ ಹರಿಯಾಣಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ ಸಿಡಿಸಿದ್ದರಿಂದ ಕೆಲವು ರೈತರು ಗಾಯಗೊಂಡಿದ್ದಾರೆ.

'ಕನಿಷ್ಠ ಎಂಟು ರೈತರು ಗಾಯಗೊಂಡಿದ್ದಾರೆ. ಅವರನ್ನು ಚಂಢೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಗೆ (ಪಿಜಿಐಎಂಇಆರ್) ದಾಖಲಿಸಲಾಗಿದೆ. ಇದರಿಂದಾಗಿ ಪಾದಯಾತ್ರೆ ಸ್ಥಗಿತಗೊಳಿಸಲಾಗಿದೆ' ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಢೆರ್ ತಿಳಿಸಿದ್ದಾರೆ.

'ರೈತ ಸಂಘಟನೆಯ ಸಭೆಯ ಬಳಿಕ ಮುಂದಿನ ಹೋರಾಟದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಅವರು ತಿಳಿಸಿದ್ದಾರೆ.

ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಸ್ಥಾಪಿಸಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಲಾಗಿತ್ತು.

ಶಂಭು ಗಡಿಯಲ್ಲಿ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ 101 ರೈತರು ಶುಕ್ರವಾರ ಕಾಲ್ನಡಿಗೆಯಲ್ಲಿ 'ದೆಹಲಿ ಚಲೋ' ಹೊರಟಿದ್ದರು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಲಾಗಿದೆ.

(ಪಿಟಿಐ ಚಿತ್ರ)

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.