ADVERTISEMENT

ಪ್ರತಿಭಟನೆಗೆ ಮುಂದಾದ ರೈತರನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 11:39 IST
Last Updated 16 ಸೆಪ್ಟೆಂಬರ್ 2022, 11:39 IST
ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್
ಪಂಜಾಬ್ ಮುಖ್ಯಮಂತ್ರಿ ಭಗವಾನ್ ಮಾನ್   

ಫಾಗ್ವಾರ (ಪಂಜಾಬ್): ಶನಿವಾರದಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಪಂಜಾಬ್‌ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ. ಹೀಗಾಗಿ ಭಾರತೀಯ ರೈತ ಒಕ್ಕೂಟ (ಡಯೋಬ) ಪ್ರತಿಭಟನೆಯನ್ನು ಮುಂದೂಡಿದೆ.

ಕೃಷಿ ಸಚಿವ ಕುಲದೀಪ್‌ ಸಿಂಗ್‌ ಧಲಿವಾಲ್‌ ಅವರು, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸೆಪ್ಟೆಂಬರ್‌ 20ರಂದು ಸಭೆ ನಡೆಸಲಿದ್ದಾರೆ ಎಂದುಭಾರತೀಯ ರೈತ ಒಕ್ಕೂಟದ ಡಯೋಬ ಭಾಗದ ಅಧ್ಯಕ್ಷ ಮಂಜೀತ್‌ ಸಿಂಗ್‌ ರೈ ತಿಳಿಸಿದ್ದಾರೆ.

ಡಯೋಬ ಭಾಗದ ರೈತರಿಗೆ ಪಾವತಿಸಬೇಕಿರುವ ₹ 72 ಕೋಟಿ ಬಾಕಿ ಪಾವತಿಸುವಂತೆ ಮತ್ತು 60 ಲಕ್ಷ ಕ್ವಿಂಟಾಲ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಫಾಗ್ವಾರ ಸಕ್ಕರೆ ಕಾರ್ಖಾನೆಯನ್ನುಕೂಡಲೇ ಆರಂಭಿಸುವಂತೆ ಒತ್ತಾಯಿಸಲಾಗುತ್ತಿದೆ ಬಿಕೆಯು ಪ್ರಧಾನ ಕಾರ್ಯದರ್ಶಿ ಸತ್ನಾಮ್‌ ಸಿಂಗ್‌ ಸಹನಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.