ADVERTISEMENT

ಅರಣ್ಯ ಒತ್ತುವರಿ: ರಾಜ್ಯವೇ ಮುಂದೆ

ಕಲ್ಯಾಣ್‌ ರೇ
Published 27 ಸೆಪ್ಟೆಂಬರ್ 2019, 20:01 IST
Last Updated 27 ಸೆಪ್ಟೆಂಬರ್ 2019, 20:01 IST
   

ನವದೆಹಲಿ: ಕರ್ನಾಟಕದಲ್ಲಿ 28,001 ಹೆಕ್ಟೇರ್‌ ಅರಣ್ಯ ಒತ್ತುವರಿಯಾಗಿದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ಅತಿ ಹೆಚ್ಚು ಅರಣ್ಯವನ್ನು ಅತಿಕ್ರಮಣದಿಂದಾಗಿ ಕಳೆದುಕೊಂಡಿದೆ.

ಕರ್ನಾಟಕದಲ್ಲಿ 28,001 ಹೆಕ್ಟೇರ್‌, ತಮಿಳುನಾಡಿನಲ್ಲಿ 15,041 ಹೆಕ್ಟೇರ್‌ ಅರಣ್ಯ ಒತ್ತುವರಿಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಲಾದ ಅರ್ಜಿಗೆ ಕೇಂದ್ರ ಪರಿಸರ ಅರಣ್ಯ ಸಚಿವಾಲಯವು ಉತ್ತರಿಸಿದೆ.

ಕೇರಳದಲ್ಲಿ 7,801 ಹೆಕ್ಟೇರ್‌ ಮತ್ತು ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಕ್ರಮವಾಗಿ 1,691 ಹೆಕ್ಟೇರ್‌ ಮತ್ತು 3,056 ಹೆಕ್ಟೇರ್‌ ಅರಣ್ಯ ಅತಿಕ್ರಮಣವಾಗಿದೆ. ‘ದೇಶದಲ್ಲಿ ಒಟ್ಟು 12,81,397 ಹೆಕ್ಟೇರ್‌ ಅರಣ್ಯ ನಾಶವಾಗಿದೆ ಎಂಬುದು ಆಘಾತಕರ ವಿಚಾರ. 250 ಕೋಟಿ ಟನ್‌ ಇಂಗಾಲದ ಡೈಆಕ್ಸೈಡ್‌ ಅನ್ನು ಹೀರುವಷ್ಟು ಅರಣ್ಯ ಮತ್ತು ಮರಗಳನ್ನು ಹೆಚ್ಚುವರಿಯಾಗಿ ಬೆಳೆಸಬೇಕು ಎಂಬುದು ದೇಶದ ಗುರಿ. ಆದರೆ, ಅದು ಈಗಿನ ಸ್ಥಿತಿಯಲ್ಲಿ ಸುಲಭವಲ್ಲ’ ಎಂದುಆರ್‌ಟಿಐ ಅಡಿ ಅರಣ್ಯ ಒತ್ತುವರಿ ಮಾಹಿತಿ ಪಡೆದುಕೊಂಡ ಪರಿಸರವಾದಿ ಮತ್ತು ವಕೀಲ ಅಕಾಶ್‌ ವಶಿಷ್ಠ ಹೇಳಿದ್ದಾರೆ.

ADVERTISEMENT

ಸ್ವಾತಂತ್ರ್ಯ ಬಂದಾಗದೇಶದಲ್ಲಿದ್ದ ಅರಣ್ಯ ಪ್ರಮಾಣ ಎಷ್ಟು ಎಂಬ ಮಾಹಿತಿಯನ್ನುಸಚಿವಾಲಯವು ಬಹಿರಂಗಪಡಿಸಿಲ್ಲ. ಅಂತಹ ಮಾಹಿತಿ ದೇಶದ ಅರಣ್ಯ ಸಮೀಕ್ಷೆ ಸಂಸ್ಥೆಯಲ್ಲಿ ಇಲ್ಲ ಎಂದು ಹೇಳಿದೆ. ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ(32,87,263 ಚದರ ಕಿ.ಮೀ.) ಅರಣ್ಯ ಪ್ರದೇಶದ ವಿಸ್ತೀರ್ಣ 7,08,273 ಚದರ ಕಿ.ಮೀ. ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 21.54 ರಷ್ಟಾಗುತ್ತದೆ.

ಅತಿ ಹೆಚ್ಚು ಒತ್ತುವರಿ

5,34,717 ಹೆಕ್ಟೇರ್‌:ಮಧ್ಯಪ್ರದೇಶ

3,17,215 ಹೆಕ್ಟೇರ್‌:ಅಸ್ಸಾಂ

78,505 ಹೆಕ್ಟೇರ್‌:ಒಡಿಶಾ

60,504 ಹೆಕ್ಟೇರ್‌:ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.