ADVERTISEMENT

ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2023, 9:39 IST
Last Updated 12 ಏಪ್ರಿಲ್ 2023, 9:39 IST
ಕೇಶುಬ್ ಮಹೀಂದ್ರಾ
ಕೇಶುಬ್ ಮಹೀಂದ್ರಾ   

ಮುಂಬೈ : ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ತಮ್ಮ 99ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ. $1.2 ಬಿಲಿಯನ್ (₹98,518,203,600) ಆಸ್ತಿಯನ್ನು ಹೊಂದಿರುವ ಇವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಎಂದು ಖ್ಯಾತಿ ಪಡೆದಿದ್ದರು.

1923ರ ಅಕ್ಟೋಬರ್ 9ರಂದು ಶಿಮ್ಲಾದಲ್ಲಿ ಜನಿಸಿದ್ದ ಕೇಶುಬ್‌ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. 1947ರಲ್ಲಿ ಮಹೀಂದ್ರಾ ಆಂಡ್‌ ಮಹೀಂದ್ರಾ ಗ್ರೂಪ್‌ನಲ್ಲಿ ಕೆಲಸ ಆರಂಭಿಸಿದ ಇವರು 1963ರಲ್ಲಿ ಕಂಪೆನಿಯ ಅಧ್ಯಕ್ಷರಾಗಿ ಆಯ್ಕೆಯಾದರು.

ಸುಮಾರು 48 ಮಹೀಂದ್ರಾ ಗ್ರೂಪ್‌ ಕಂಪೆನಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೇಶುಬ್‌ ಅವರು ಕಂಪೆನಿಯನ್ನು ಆಟೋಮೊಬೈಲ್ ಕ್ಷೇತ್ರದಿಂದ ಐಟಿ, ರಿಯಲ್ ಎಸ್ಟೇಟ್, ಹಣಕಾಸು ಸೇವೆಗಳು ಹೀಗೆ ಇತರ ಕ್ಷೇತ್ರಗಳಿಗೂ ವಿಸ್ತರಿಸಿದ್ದರು.ಅಲ್ಲದೇ ವಿಲ್ಲಿಸ್ ಕಾರ್ಪೊರೇಷನ್, ಮಿತ್ಸುಬಿಷಿ, ಇಂಟರ್ನ್ಯಾಷನಲ್ ಹಾರ್ವೆಸ್ಟರ್, ಯುನೈಟೆಡ್ ಟೆಕ್ನಾಲಜೀಸ್, ಬ್ರಿಟಿಷ್ ಟೆಲಿಕಾಂ ಅಂತಹ ಜಾಗತಿಕ ಕಂಪೆನಿಗಳ ಮೈತ್ರಿ ಮಾಡಿಕೊಂಡು ವ್ಯಾಪಾರ ವಿಸ್ತರಿಸಿದ್ದರು.ಜೆಆರ್‌ಡಿ ಟಾಟಾ ಅವರ ಅಭಿಮಾನಿಯಾದ ಇವರು ತನ್ನ ಸಾಧನೆಗೆ ಅವರೇ ಸ್ಪೂರ್ತಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ADVERTISEMENT

2021ರಲ್ಲಿ ಕಂಪೆನಿಯ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿದ್ದರು. ತದನಂತರ ಕಂಪೆನಿಯ ರೂವಾರಿಯನ್ನು ಕೇಶುಬ್‌ ಮಹೀಂದ್ರಾ ಅವರ ಸೋದರಳಿಯ ಆನಂದ್‌ ಮಹೀಂದ್ರಾ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.