ADVERTISEMENT

ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್‌ನಿಂದ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2024, 10:03 IST
Last Updated 1 ಮಾರ್ಚ್ 2024, 10:03 IST
<div class="paragraphs"><p>ರಿಂಕಿ ಚಕ್ಮಾ</p></div>

ರಿಂಕಿ ಚಕ್ಮಾ

   

ನವದೆಹಲಿ: ತ್ರಿಪುರಾ ಮೂಲದ ಮಾಜಿ ಮಿಸ್‌ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ (28) ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ರಿಂಕಿ ನಿಧನರಾಗಿದ್ದಾರೆ ಎಂದು ಮಿಸ್‌ ಇಂಡಿಯಾ ಸಂಸ್ಥೆ ಪೋಸ್ಟ್‌ ಹಂಚಿಕೊಂಡಿದ್ದು ಸಂತಾಪ ಸೂಚಿಸಿದೆ.

‘ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸುತ್ತೇವೆ. ರಿಂಕಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ರಿಂಕಿ, ನಿಮ್ಮ ಉದ್ದೇಶ ಮತ್ತು ಸೌಂದರ್ಯದ ಪರಂಪರೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದು ಮಿಸ್‌ ಇಂಡಿಯಾ ಸಂಸ್ಥೆ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. 

ADVERTISEMENT

ಕಳೆದ ತಿಂಗಳು ರಿಂಕಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯಾನ್ಸರ್‌ ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಾನು ಈ ವಿಚಾರವನ್ನು ಯಾರಲ್ಲಿಯೂ ಹಂಚಿಕೊಂಡಿರಲಿಲ್ಲ, ಆದರೆ ಈಗ ಹೇಳುವ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದರು.

ಮೊದಲ ಬಾರಿ ಶಸ್ತ್ರಚಿಕಿತ್ಸಗೆ ಒಳಗಾದ ಬಳಿಕ ಮಾಹಿತಿ ಹಂಚಿಕೊಂಡಿದ್ದ ರಿಂಕಿ, ಶ್ವಾಸಕೋಶದಲ್ಲಿ ಮೊದಲು ಕ್ಯಾನ್ಸರ್‌ ಕಾಣಿಸಿಕೊಂಡಿತ್ತು, ಬಳಿಕ ಮೆದುಳಿನ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಕ್ಯಾನ್ಸರ್‌ ನನ್ನ ಅರ್ಧ ದೇಹವನ್ನು ಆವರಿಸಿದೆ, ತಲೆಯ ಶಸ್ತ್ರಚಿಕಿತ್ಸೆ ಆಗಬೇಕಿದೆ. ಕಿಮೋಥೆರಪಿಯಿಂದ ಮಾತ್ರ ನಾನು ಬದುಕಲು ಸಾಧ್ಯ, ಅದೂ ಶೇ 30 ರಷ್ಟು ಮಾತ್ರ ಬದುಕುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನುವುದಾಗಿ ಆರೋಗ್ಯ ಸಮಸ್ಯೆಯ ಬಗ್ಗೆ ರಿಂಕಿ ಬಹಿರಂಗಪಡಿಸಿದ್ದರು.

ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 'ಬ್ಯೂಟಿ ವಿತ್ ಎ ಪರ್ಪಸ್' ಪ್ರಶಸ್ತಿಯನ್ನು ಗಳಿಸಿದ್ದರು. ಹರಿಯಾಣ ಮೂಲದ ಮಾನುಷಿ ಚಿಲ್ಲರ್ ಮಿಸ್ ಇಂಡಿಯಾ ಮುಡಿಗೇರಿಸಿಕೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.