ADVERTISEMENT

ಗುಜರಾತ್‌ ಚುನಾವಣೆಗೆ ಮಾಜಿ ಪತ್ರಕರ್ತ ಇಸುದನ್ ಗಧ್ವಿ ಎಎಪಿಯ ಸಿಎಂ ಅಭ್ಯರ್ಥಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2022, 10:10 IST
Last Updated 4 ನವೆಂಬರ್ 2022, 10:10 IST
 ಇಸುದನ್ ಗಧ್ವಿ (ಟ್ವಿಟರ್‌ ಚಿತ್ರ: @isudan_gadhvi)
ಇಸುದನ್ ಗಧ್ವಿ (ಟ್ವಿಟರ್‌ ಚಿತ್ರ: @isudan_gadhvi)   

ಗಾಂಧಿನಗರ: ಮಾಜಿ ಪತ್ರಕರ್ತ ಇಸುದನ್‌ ಗಧ್ವಿ ಗುಜರಾತ್‌ ಚುನಾವಣೆಗೆ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶುಕ್ರವಾರ ಗಧ್ವಿ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. 40 ವರ್ಷದ ಗಧ್ವಿ ಅವರು ಶೇ. 70ರಷ್ಟು ಮತಗಳನ್ನು ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಂತೆ ಜನರಿಗೆ ಮನವಿ ಮಾಡಿದ್ದ ಅರವಿಂದ ಕೇಜ್ರಿವಾಲ್‌, ಅದಕ್ಕಾಗಿ ಮೊಬೈಲ್‌ ನಂಬರ್‌, ಇ–ಮೇಲ್‌ ವಿಳಾಸವನ್ನು ನೀಡಿದ್ದರು.

ADVERTISEMENT

ಜನರಿಂದ ಬಂದ ಅಭಿಮತವನ್ನು ಸಂಗ್ರಹಿಸಿರುವ ಎಎಪಿ ಶುಕ್ರವಾರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸಿದೆ.

‘ನನ್ನಂಥ ಸಾಮಾನ್ಯನ ಮೇಲೆ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ಮತ್ತು ಗುಜರಾತ್ ಜನತೆಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಜನರ ಸೇವಕನಾಗುವ ಮೂಲಕ, ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇನೆ’ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಗಧ್ವಿ ಟ್ವೀಟ್‌ ಮಾಡಿದ್ದಾರೆ.

ಗಧ್ವಿ ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತರ ಕುಟುಂಬದವರು. ರಾಜ್ಯದ ಜನಸಂಖ್ಯೆಯಲ್ಲಿ ಶೇ. 48 ರಷ್ಟಿರುವ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.