
ಪಿಟಿಐ
ಉದಿತ್ ನಾರಾಯಣ್
–ಪಿಟಿಐ ಚಿತ್ರ
ಪಟ್ನಾ: ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ಝಾ ಅವರು, ಉದಿತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.
ರಂಜನಾ ಝಾ ವಾಸವಿರುವ ಬಿಹಾರದ ಸುಪಾಲ್ ಪ್ರದೇಶದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ತಮ್ಮ ಒಪ್ಪಿಗೆ ಇಲ್ಲದೆ ನವದೆಹಲಿಯ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶವನ್ನು ತೆಗೆದುಹಾಕಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.
ಉದಿತ್ ನಾರಾಯಣ್ ರಂಜನಾ ಅವರನ್ನು 1984ರಲ್ಲಿ ವಿವಾಹವಾಗಿದ್ದರು. 1985ರಲ್ಲಿ ಗಾಯನ ಕ್ಷೇತ್ರದಲ್ಲಿ ಮುಂದುವರಿಯಲು ಅವರು ಮುಂಬೈಗೆ ಬಂದು ನೆಲೆಸಿದ್ದರು. ದೀಪಾ ನಾರಾಯಣನ್ ಅವರನ್ನು ಮದುವೆಯಾಗಿರುವ ಉದಿತ್ ಸದ್ಯ ಅವರೊಂದಿಗೆ ನೆಲೆಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.