ADVERTISEMENT

ಜಮ್ಮು–ಕಾಶ್ಮೀರದಲ್ಲಿ ಮುಂದಿನ ವರ್ಷ G20 ಶೃಂಗಸಭೆ

ಪಿಟಿಐ
Published 24 ಜೂನ್ 2022, 2:24 IST
Last Updated 24 ಜೂನ್ 2022, 2:24 IST
   

ಜಮ್ಮು: 2023ರ G20 ಶೃಂಗಸಭೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ. ಈ ಕುರಿತಂತೆ ಈಗಾಗಲೇ ಐವರು ಸದಸ್ಯರ ಸಹಕಾರ ಸಮಿತಿಯನ್ನು ರಚಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧತಿ ಬಳಿಕ ನಡೆಯುತ್ತಿರುವ ಮೊದಲ ಮತ್ತು ಅಂತರರಾಷ್ಟ್ರೀಯ ಸಭೆ ಇದಾಗಿದ್ದು, ಉನ್ನತ ಮಟ್ಟದ ಸಮಿತಿ ರಚನೆ ಮತ್ತು ಸಿದ್ಧತೆ ನಡೆದಿದೆ.

ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ರಚನೆ ಮಾಡಲಾಗಿತ್ತು.

ADVERTISEMENT

ಮುಂದಿನ ವರ್ಷ G20 ಶೃಂಗಸಭೆ ನಡೆಸುವ ಕುರಿತು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅಲ್ಲದೆ, ಸಂಬಂಧಿತ ಇಲಾಖೆಗಳ ಸಿದ್ಧತೆ ಆರಂಭವಾಗಿದೆ.

ಸಾರಿಗೆ, ಪ್ರವಾಸೋದ್ಯಮ, ಶಿಷ್ಟಾಚಾರ ಮತ್ತು ಅತಿಥಿಗಳ ನಿರ್ವಹಣೆ, ಸಂಸ್ಕೃತಿ ಸಚಿವಾಲಯ ಹೀಗೆ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ G20 ಶೃಂಗಸಭೆ ನಡೆಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.