
ಪಿಟಿಐ
ಪುಣೆ: ‘ಗಗನಯಾನಿ’ ಆಗುವುದು ಭಾರತದಲ್ಲಿ ಈಗ ವೃತ್ತಿಯಾಗಿದೆ. ಯುವ ಮನಸ್ಸುಗಳಿಗೆ ಈ ವೃತ್ತಿಯಲ್ಲಿ ಬಹಳಷ್ಟು ಅವಕಾಶಗಳಿವೆ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದರು.
ಪುಣೆ ಸಾಹಿತ್ಯ ಹಬ್ಬದಲ್ಲಿ ಭಾನುವಾರ ಮಾತನಾಡಿದ ಅವರು, ‘ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು 1984ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದಾಗ ನಾನು ಹುಟ್ಟಿಯೇ ಇರಲಿಲ್ಲ. ನಾನು ಹುಟ್ಟಿದ್ದು 1985ರಲ್ಲಿ. ಅವರ ಕಥೆಗಳನ್ನು ಕೇಳುತ್ತಲೇ ಬೆಳೆದೆ. ನಾನೂ ಗಗನಯಾನಿ ಆಗುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ಯಾಕೆಂದರೆ, ಭಾರತದಲ್ಲಿ ಬಾಹ್ಯಾಕಾಶ ಯೋಜನೆಗಳೇ ಇರಲಿಲ್ಲ’ ಎಂದರು.
‘ಆದರೆ, ಇಂದು ಪರಿಸ್ಥಿತಿ ಹಾಗಿಲ್ಲ. ನಾನು ಎಲ್ಲೇ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರೂ ಗಗನಯಾನಿ ಆಗುವುದು ಹೇಗೆ ಎಂದು ನನ್ನನ್ನು ಕೇಳುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.