ADVERTISEMENT

ಗಾಂಧಿ ಕುಟುಂಬದ ಆಶೀರ್ವಾದ ನನಗೂ, ಖರ್ಗೆಗೂ ಇದೆ: ತರೂರ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 16:26 IST
Last Updated 9 ಅಕ್ಟೋಬರ್ 2022, 16:26 IST
ಶಶಿ ತರೂರ್‌
ಶಶಿ ತರೂರ್‌   

ಮುಂಬೈ: ‘ಗಾಂಧಿ ಪರಿವಾರದ ಆಶೀರ್ವಾದ ನನಗೂ ಮತ್ತು ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇದೆ. ಈ ವಿಚಾರದಲ್ಲಿ ಗಾಂಧಿ ಕುಟುಂಬ ಯಾವುದೇ ಪಕ್ಷಪಾತ ಮಾಡುತ್ತಿಲ್ಲ’ ಎಂದುಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ, ಸಂಸದ ಶಶಿ ತರೂರ್‌ ಭಾನುವಾರ ಹೇಳಿದ್ದಾರೆ.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,2024ರ ಚುನಾವಣೆಗೆ ಮುನ್ನ ಪಕ್ಷವನ್ನು ಬಲಪಡಿಸುವುದು ನಮ್ಮ ಉದ್ದೇಶ ಎಂದರು.

ಪಕ್ಷದ ಅಧಿಕೃತ ಅಭ್ಯರ್ಥಿ (ಖರ್ಗೆ) ಮತ್ತು ಅನಧಿಕೃತ ಅಭ್ಯರ್ಥಿ (ಶಶಿ) ಅವರ ನಡುವೆ ಅಧ್ಯಕ್ಷೀಯ ಚುನಾವಣಾ ಸಮರ ನಡೆಯುತ್ತಿದೆ ಎಂಬ ಊಹಾ‍ಪೋಹಗಳನ್ನು ತಳ್ಳಿಹಾಕಿದ ಅವರು,‘ನಾವಿಬ್ಬರು ಪಕ್ಷ ಬಲಪಡಿಸುವ ಸಲುವಾಗಿ ಸ್ಪರ್ಧಿಸುತ್ತಿದ್ದೇವೆ.ಪಕ್ಷದಲ್ಲಿ ಬದಲಾವಣೆಯ ಅಗತ್ಯವಿದೆ. ನಾನೇ ಬದಲಾವಣೆಯ ಪ್ರವರ್ತಕ’ ಎಂದರು.

ADVERTISEMENT

2024ರ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ವಿಪಕ್ಷದ ಸ್ಥಾನದಲ್ಲಿ ಕೂರುವುದು ಖಚಿತ.ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.