
ಚಂಡೀಗಢ: ಇಲ್ಲಿನ ಸೆಕ್ಟರ್–26ರ ಟಿಂಬರ್ ಮಾರ್ಕೆಟ್ ಬಳಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಪಾತಕಿ ಲಾರೆನ್ಸ್ ಬಿಷ್ಣೋಯ್‌ನ ಮಾಜಿ ಆಪ್ತ ಸಹಾಯಕ ಇಂದರ್‌ಪ್ರೀತ್ ಸಿಂಗ್ ಅಲಿಯಾಸ್ ಪ್ಯಾರಿ (35) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪ್ಯಾರಿ ವಿರುದ್ಧ ಚಂಡೀಗಢ ಮತ್ತು ಪಂಜಾಬ್‌ನಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಬಿಷ್ಣೋಯ್ ಗುಂಪಿನಿಂದ ಬೇರ್ಪಟ್ಟಿದ್ದ ಗೋಲ್ಡಿ ಬ್ರಾರ್ ಗುಂಪಿನಲ್ಲಿ ಪ್ಯಾರಿ ಗುರುತಿಸಿಕೊಂಡಿದ್ದರು.
ವಿದೇಶದ ಪಾತಕಿ ಗೋಲ್ಡಿ ಬ್ರಾರ್ ಧ್ವನಿ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಕಾಣಿಸಿಕೊಂಡಿದ್ದು, ಬಿಷ್ಣೋಯ್ ಪ್ಯಾರಿಯನ್ನು ಕೊಲ್ಲಲು ಕಾರಣ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಸೋಮವಾರ ಸಂಜೆ ಖಾಸಗಿ ಕ್ಲಬ್‌ನಿಂದ ಎಸ್‌ಯುವಿಯಲ್ಲಿ ಹೊರಟ ವ್ಯಕ್ತಿಯೊಬ್ಬರು ಪ್ಯಾರಿ ಮೇಲೆ ಮೊದಲು ಗುಂಡು ಹಾರಿಸಿದ್ದಾರೆ. ನಂತರ ಎಸ್‌ಯುವಿಯನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ವಾಹನದಲ್ಲಿದ್ದ ದುಷ್ಕರ್ಮಿಯೊಬ್ಬರು ಗುಂಡು ಹಾರಿಸಿದ್ದಾರೆ. ಪ್ಯಾರಿ ಅವರನ್ನು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
‘ಕೆಲ ಶಂಕಿತರ ಹೆಸರುಗಳನ್ನು ಗುರುತಿಸಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಚಂಡೀಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕನ್ವರ್‌ದೀಪ್ ಕೌರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.