ADVERTISEMENT

ಚುನಾವಣಾ ಆಯೋಗದ ಕಾರ್ಯವಿಧಾನ ತನಿಖೆಗೆ ಚಳವಳಿ ಆರಂಭಿಸಬೇಕು: ಗೌರವ್‌ ಗೊಗೊಯ್‌

ಪಿಟಿಐ
Published 6 ನವೆಂಬರ್ 2025, 14:01 IST
Last Updated 6 ನವೆಂಬರ್ 2025, 14:01 IST
<div class="paragraphs"><p>ಗೌರವ್‌ ಗೊಗೊಯ್‌</p></div>

ಗೌರವ್‌ ಗೊಗೊಯ್‌

   

ಗುವಾಹಟಿ: ‘ಚುನಾವಣಾ ಆಯೋಗದ ಕಾರ್ಯವಿಧಾನದ ಬಗ್ಗೆ ತನಿಖೆಗೆ ಆಗ್ರಹಿಸಿ ದೇಶದಾದ್ಯಂತ ಚಳವಳಿ ನಡೆಸಬೇಕು’ ಎಂದು ಲೋಕಸಭೆ ವಿರೋಧ ಪಕ್ಷದ ಉಪನಾಯಕ ಗೌರವ್‌ ಗೊಗೊಯ್‌ ಅವರು ಗುರುವಾರ ಹೇಳಿದು.

ಹರಿಯಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಲೋಕಸಭೆ ವಿರೋಧ ‍‍ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ನಡೆಸಿದ್ದ ಮಾಧ್ಯಮಗೋಷ್ಠಿಯನ್ನು ಕುರಿತು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಆಯೋಗದ ಕಾರ್ಯವಿಧಾನದ ಬಗ್ಗೆ ತನಿಖೆ ನಡೆಸಲು ಮತ್ತು ಈ ಸಂಸ್ಥೆಯಲ್ಲಿ ಸುಧಾರಣೆ ತರಲು ಚಳವಳಿ ಆರಂಭವಾಗವೇಕು’ ಎಂದರು.

ADVERTISEMENT

‘ಮತಗಳ್ಳತನದ ಕುರಿತು ಚುನಾವಣಾ ಆಯೋಗವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅದು ನಿಷ್ಕ್ರಿಯವಾಗಿದೆ. ಭಾರತದ ಜನರಿಗೆ ತಾನು ಮಾಡಿರುವ ಅನ್ಯಾಯವನ್ನು ಮುಚ್ಚಿಕೊಳ್ಳಲು ಅದು ಹೀಗೆ ಮಾಡುತ್ತಿದೆ. ಜೊತೆಗೆ, ಇದು ಒಂದು ರೀತಿಯಲ್ಲಿ ಆಯೋಗದ ತಪ್ಪೊಪ್ಪಿಗೆಯೂ ಹೌದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.