ADVERTISEMENT

ಚೀನಾದ ರೋಬೊ ನಾಯಿಯನ್ನು ತಮ್ಮದೆಂದು ಪ್ರದರ್ಶಿಸಿದ ಗ್ಲಾಗೋಟಿಯ ವಿವಿ; ವ್ಯಾಪಕ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 7:49 IST
Last Updated 18 ಫೆಬ್ರುವರಿ 2026, 7:49 IST
<div class="paragraphs"><p> ರೋಬೊ ನಾಯಿ (ಸಾಂಕೇತಿಕ ಚಿತ್ರ)</p></div>

ರೋಬೊ ನಾಯಿ (ಸಾಂಕೇತಿಕ ಚಿತ್ರ)

   

ನವದೆಹಲಿ: ಇಲ್ಲಿ ನಡೆಯುತ್ತಿರುವ ಎಐ ವೇಳದಿಂದ ಗ್ಲಾಗೋಟಿಯ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು ಶೃಂಗಸಭೆಯಿಂದ ಹೊರನಡೆಯಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೋಯ್ಡಾ ಮೂಲದ ಗ್ಲಾಗೋಟಿಯ ವಿಶ್ವವಿದ್ಯಾಲಯ ಪ್ರತಿನಿಧಿಗಳು ಎಐ ಎಕ್ಸ್‌ಪೋದಲ್ಲಿ ಚೀನಾದಲ್ಲಿ ತಯಾರಿಸಲಾದ ರೋಬೊ ನಾಯಿಯನ್ನು ತಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ ಎಂದು ಪರಿಚಯಿಸಿದ್ದರು.

ADVERTISEMENT

ವಿಶ್ವವಿದ್ಯಾಲಯ ಪ್ರತಿನಿಧಿಗಳ ಈ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಎಐ ವೇಳದ ಅಧಿಕಾರಿಗಳು ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು ಸಭೆಯಿಂದ ಹೊರನಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.

ಯುನಿಟ್ರೀ ಗೊ–2 ಎಂಬ ರೋಬೊ ನಾಯಿ ಚೀನಾದ ವಾಣಿಜ್ಯ ಮಾದರಿಯಾಗಿದೆ. ಇದು ಜಾಗತಿಕ ಆನ್‌ಲೈನ್‌ ವೇದಿಕೆಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಇದರ ಬೆಲೆ ₹ 2 ಲಕ್ಷದಿಂದ ₹3 ಲಕ್ಷ ಇದೆ ಎಂದು ಮೂಲಗಳು ತಿಳಿಸಿವೆ.

ಶೃಂಗಸಭೆಯಲ್ಲಿ ಈ ರೊಬೊ ನಾಯಿಯನ್ನು ವಿಶ್ವವಿದ್ಯಾಲಯದ ಪ್ರತಿನಿಧಿಗಳು ‘ಒರಿಯನ್‌‘ ಎಂದು ಪ್ರದರ್ಶಿಸಿದ್ದರು. ಮಾಧ್ಯಮ ಸಂವಾದದ ವೇಳೆ ಈ ರೋಬೋಟ್‌ನ ವೈಶಿಷ್ಟ್ಯಗಳನ್ನು ವಿವರಿಸಿದ್ದರು.

ಸರ್ಕಾರವು ಶೃಂಗಸಭೆಯಿಂದ ಖಾಲಿ ಮಾಡಲು ಸೂಚನೆ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಆದರೆ ಇಂದು ನಾವು ಎಲ್ಲರೂ ಇಲ್ಲಿ ಹಾಜರಿದ್ದೇವೆ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.