ADVERTISEMENT

Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ಪಿಟಿಐ
Published 10 ಡಿಸೆಂಬರ್ 2025, 4:29 IST
Last Updated 10 ಡಿಸೆಂಬರ್ 2025, 4:29 IST
<div class="paragraphs"><p>ಗೋವಾ ನೈಟ್ ಕ್ಲಬ್ ಅಗ್ನಿ ಅವಘಡ</p></div>

ಗೋವಾ ನೈಟ್ ಕ್ಲಬ್ ಅಗ್ನಿ ಅವಘಡ

   

(ಪಿಟಿಐ ಚಿತ್ರ)

ಪಣಜಿ: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಗೋವಾದ 'ಬರ್ಚ್‌ ಬೈ ರೋಮಿಯೊ ಲೇನ್‌ ನೈಟ್‌ ಕ್ಲಬ್‌'‌ನಲ್ಲಿ ಶನಿವಾರ ತಡರಾತ್ರಿ (ಡಿ.6) ಸಂಭವಿಸಿದ ಬೆಂಕಿ ಅವಘಡದಲ್ಲಿ 25 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

'ನೈಟ್‌ಕ್ಲಬ್ ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆಗಾಗಿ ಅವರನ್ನು ಇಂದು ಗೋವಾಕ್ಕೆ ಕರೆತರಲಾಗುವುದು. ಶೀಘ್ರದಲ್ಲೇ ಬಂಧಿಸಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮೊದಲು ದೆಹಲಿ ನಿವಾಸದಲ್ಲಿ ಗುಪ್ತಾ ಅವರನ್ನು ಪತ್ತೆ ಹಚ್ಚಲು ವಿಫಲರಾದ ಕಾರಣ ಲುಕ್‌ ಔಟ್‌ ಸರ್ಕ್ಯುಲರ್‌ (ಎಲ್ಒಸಿ) ಹೊರಡಿಸಲಾಗಿತ್ತು.

ನೈಟ್‌ಕ್ಲಬ್‌ನ ಇನ್ನಿಬ್ಬರು ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಥಾಯ್ಲೆಂಡ್‌ಗೆ ಪರಾರಿಯಾಗಿದ್ದಾರೆ. ಅವರನ್ನು ವಶಕ್ಕೆ ಪಡೆಯಲು ಇಂಟರ್‌ಪೋಲ್‌, ಬ್ಲ್ಯೂ ಕಾರ್ನರ್‌ ನೋಟಿಸ್ ಜಾರಿ ಮಾಡಿದೆ.

ಈವರೆಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ನೈಟ್‌ಕ್ಲಬ್‌ನ ಪ್ರಧಾನ ವ್ಯವಸ್ಥಾಪಕ ರಾಜೀವ್ ಮೋದಕ್, ವ್ಯವಸ್ಥಾಪಕ ವಿವೇಕ್ ಸಿಂಗ್, ಬಾರ್ ಮ್ಯಾನೇಜರ್ ರಾಜೀವ್ ಸಿಂಘಾನಿಯಾ, ಗೇಟ್ ಮ್ಯಾನೇಜರ್ ರಿಯಾನ್ಶು ಠಾಕೂರ್ ಮತ್ತು ಕ್ಲಬ್ ಉದ್ಯೋಗಿ ಭರತ್ ಕೊಹ್ಲಿ ಎಂಬವರನ್ನು ಬಂಧಿಸಲಾಗಿದೆ.

ಮತ್ತೊಬ್ಬ ಮಾಲೀಕ ಬ್ರಿಟನ್ ಮೂಲದ ಸುರಿಂದರ್ ಕುಮಾರ್ ಖೋಸ್ಲಾ ವಿರುದ್ಧವೂ ಎಲ್ಒಸಿ ಹೊರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.