ADVERTISEMENT

ಜನರ ಸಮಸ್ಯೆಗಳನ್ನು ಕಡೆಗಣಿಸುತ್ತಿರುವ ಮೋದಿ ಸರ್ಕಾರ: ಪ್ರಿಯಾಂಕಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 9:49 IST
Last Updated 7 ನವೆಂಬರ್ 2019, 9:49 IST
   

ಬೆಂಗಳೂರು:ಕೇಂದ್ರದಲ್ಲಿನಆಡಳಿತಪಕ್ಷದಲ್ಲಿರುವವರು ತಮ್ಮ ಸ್ವಂತ ಕಾರ್ಯದಲ್ಲಿ ಮಗ್ನರಾಗಿದ್ದು ಜನರ ಸಮಸ್ಯೆಗಳ ಕಡೆಗಮನ ಹರಿಸುತ್ತಿಲ್ಲ ಎಂದುಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿಯು ತುಂಬಾ ಹದಗೆಟ್ಟಿದ್ದು,ಸೇವಾ ವಲಯಕುಸಿದಿದೆ, ಉದ್ಯೋಗಾವಕಾಶಗಳುಕಡಿಮೆಯಾಗಿವೆ, ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದರೂ ಬಿಜೆಪಿ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.

ಅಮೆರಿಕವು ಭಾರತೀಯರಿಗೆ ಎಚ್‌ 1ಬಿ ವೀಸಾಕಡಿತ ಮಾಡಿದ್ದುಉದ್ಯೋಗಕ್ಕಾಗಿ ಅಲ್ಲಿಗೆ ಹೊರಡುವವರಿಗೆ ಸಮಸ್ಯೆಯಾಗಿದೆ, ಪ್ರಧಾನಿ ಮೋದಿಯವರ ಹೌಡಿ ಮೋದಿ ಕಾರ್ಯಕ್ರಮದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಿಯಾಂಕ ಗಾಂಧಿ ಟೀಕಿಸಿದ್ದಾರೆ.

ADVERTISEMENT

ಬಿಜೆಪಿ ಅಧಿಕಾರದಅವಧಿಯಲ್ಲಿ ಯಾರಿಗೆ ಪ್ರಯೋಜನವಾಗಿದೆ ಎಂದು ಎಲ್ಲರೂ ಪ್ರಶ್ನಿಸಬೇಕು , ಹೌಡಿ ಮೋದಿ ಕಾರ್ಯಕ್ರಮದ ಹೊರತಾಗಿಯೂ ಭಾರತೀಯರಿಗೆ ಅಮೆರಿಕಎಚ್‌ 1ಬಿ ವೀಸಾನಿರಾಕರಿಸುತ್ತಾ ಬಂದಿದೆ ಎಂದು ಪ್ರಿಯಾಂಕಾ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.