ADVERTISEMENT

ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ವಿಫಲ: ‘ಲಸಿಕೆ ಉತ್ಸವ‘ದ ನಾಟಕ ಎಂದ ರಾಹುಲ್

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ

ಪಿಟಿಐ
Published 15 ಏಪ್ರಿಲ್ 2021, 8:27 IST
Last Updated 15 ಏಪ್ರಿಲ್ 2021, 8:27 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ‘ದೇಶದಲ್ಲಿರುವ ಕೋವಿಡ್‌ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ ‘ಲಸಿಕೆ ಉತ್ಸವ‘ದ ಮೂಲಕ ಜನರನ್ನು ತೃಪ್ತಿಪಡಿಸಲು ಹೊರಟಿದೆ‘ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕೊರೊನಾ ಸೊಂಕಿನ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಕೆಲವು ಕಡೆ ವೆಂಟಿಲೇಟರ್ ಅಥವಾ ಆಕ್ಸಿಜನ್ ಇಲ್ಲ. ಅಲ್ಲದೆ ಲಸಿಕೆಯೂ ಸಿಗುತ್ತಿಲ್ಲ‘ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್‌ 19 ಬಿಕ್ಕಟ್ಟನ್ನು ನಿರ್ವಹಣೆ ಮಾಡುವುದಕ್ಕಾಗಿ ಪಿಎಂ–ಕೇರ್ಸ್‌ಗೆ ಬಹುದೊಡ್ಡ ಪ್ರಮಾಣದಲ್ಲಿ ದೇಣಿಗೆ ಬಂದಿದೆ. ಸರ್ಕಾರ ಆ ಹಣವನ್ನು ಏನು ಮಾಡುತ್ತಿದೆ‘ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

‘ಸೋಂಕಿನ ಪರೀಕ್ಷೆ ಇಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಆಕ್ಸಿಜಿನ್, ವೆಂಟಿಲೇಟರ್ ಇಲ್ಲ. ಆದರೆ, ಸರ್ಕಾರ ಲಸಿಕೆ ಉತ್ಸವವನ್ನು ಆಚರಿಸುತ್ತಿದೆ. ಹಾಗಾದರೆ ಪಿಎಂ–ಕೇರ್ಸ್‌ ಏನು ಮಾಡುತ್ತಿದೆ ? ಎಂದು ರಾಹುಲ್‌ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.