ADVERTISEMENT

ವಿದೇಶಿ ದೇಣಿಗೆ ಸ್ವೀಕಾರ: ಸೇವಾ ಸಂಸ್ಥೆಗಳು ಇನ್ನು 'ಆಧಾರ್' ಸಲ್ಲಿಸುವುದು ಕಡ್ಡಾಯ

ಪಿಟಿಐ
Published 20 ಸೆಪ್ಟೆಂಬರ್ 2020, 10:48 IST
Last Updated 20 ಸೆಪ್ಟೆಂಬರ್ 2020, 10:48 IST
ದೇಣಿಗೆ–ಪ್ರಾತಿನಿಧಿಕ ಚಿತ್ರ
ದೇಣಿಗೆ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್.ಸಿ.ಆರ್.ಎ) ತಿದ್ದುಪಡಿ ತರಲು ಕೇಂದ್ರ ಸಿದ್ಧತೆ ನಡೆಸಿದೆ. ಉದ್ದೇಶಿತ ತಿದ್ದುಪಡಿ ಪ್ರಕಾರ, ದೇಣಿಗೆ ಪಡೆಯಲಿರುವ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಇನ್ನು ಮುಂದೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಸಾರ್ವಜನಿಕ ಸೇವೆಯಲ್ಲಿರುವವರು ದೇಣಿಗೆ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.

ಲೋಕಸಭೆಯಲ್ಲಿ ಮಂಡಿಸಲಿರುವ ತಿದ್ದುಪಡಿ ಮಸೂದೆಯು, ಸೇವಾ ಸಂಸ್ಥೆಗಳು (ಎನ್.ಜಿ.ಒ) ತಮ್ಮ ಎಫ್.ಸಿ.ಆರ್.ಎ ಪ್ರಮಾಣಪತ್ರವನ್ನು ಸರೆಂಡರ್ ಮಾಡಲೂ ಅವಕಾಶ ಕಲ್ಪಿಸಲಿದೆ. ಅಲ್ಲದೆ, ಸ್ವೀಕರಿಸಲಾಗುವ ವಿದೇಶಿ ದೇಣಿಗೆಯಲ್ಲಿ ಶೇ 20ರಷ್ಟು ಮೊತ್ತವನ್ನಷ್ಟೇ ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಬಹುದು. ಸದ್ಯ, ಈ ಮಿತಿ ಶೇ 50ರಷ್ಟಿದೆ.

ಮೇ 1, 2011ರಂದು ಕಾಯ್ದೆ ಜಾರಿಗೆ ಬಂದಿದ್ದು, ಈವರೆಗೆ ಎರಡು ಬಾರಿ ತಿದ್ದುಪಡಿಯಾಗಿದೆ. ಮೊದಲ ಬಾರಿ 2016ರಲ್ಲಿ ಹಣಕಾಸು ಕಾಯ್ದೆ 2016ರ ವಿಧಿ 236 ಹಾಗೂ ಎರಡನೇ ಬಾರಿಗೆ 2018ರಲ್ಲಿ ಸೆಕ್ಷನ್ 220ಕ್ಕೆ ತಿದ್ದುಪಡಿ ಆಗಿದೆ.

ADVERTISEMENT

ಅಂಕಿ-ಅಂಶಗಳ ಪ್ರಕಾರ, 2016-17 ಮತ್ತು 2018-19ರ ಅವಧಿಯಲ್ಲಿ ವಿವಿಧ ನೋಂದಾಯಿತ ಸೇವಾ ಸಂಸ್ಥೆಗಳು ಒಟ್ಟು ರೂ. 58,000 ಕೋಟಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.