ADVERTISEMENT

Pahalgam Attack | ಸೇನಾ ಕಮಾಂಡರ್‌ ವಜಾ ಆಗಿಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 30 ಏಪ್ರಿಲ್ 2025, 13:45 IST
Last Updated 30 ಏಪ್ರಿಲ್ 2025, 13:45 IST
<div class="paragraphs"><p>ಭಾರತೀಯ ಸೇನೆ</p></div>

ಭಾರತೀಯ ಸೇನೆ

   

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಭಾರತೀಯ ಸೇನೆಯ ಉತ್ತರ ವಲಯದ ಕಮಾಂಡರ್‌ ಲೆ. ಜನರಲ್‌ ಎಂ.ವಿ.ಸುಚೀಂದ್ರ ಕುಮಾರ್‌ ಅವರನ್ನು ತೆಗೆದುಹಾಕಲಾಗಿದೆ ಎಂಬುದು ಸುಳ್ಳು. ಪಾಕಿಸ್ತಾನದ ಪರವಿರುವ ಕೆಲ ಸಾಮಾಜಿಕ ಜಾಲತಾಣ ಖಾತೆಗಳು ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿವೆ ಎಂದು ಸರ್ಕಾರ ಬುಧವಾರ ಹೇಳಿದೆ. 

ಪಿಐಬಿ ಸತ್ಯಶೋಧನ (ಫ್ಯಾಕ್ಟ್‌ಚೆಕ್‌) ವಿಭಾಗವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ’ಪಾಕಿಸ್ತಾನದ ಪರವಿರುವ ಕೆಲ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸುಚೀಂದ್ರ ಕುಮಾರ್‌ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುಳ್ಳು ಸುದ್ದಿ ಪಸರಿಸಲಾಗಿದೆ. ವಾಸ್ತವದಲ್ಲಿ ಸುಚೀಂದ್ರ ಕುಮಾರ್‌ ಏ.30ರಂದು ನಿವೃತ್ತಿ ಹೊಂದಿದ್ದು, ಲೆಫ್ಟಿನೆಂಟ್‌ ಜನರಲ್‌ ಪ್ರತೀಕ್‌ ಶರ್ಮಾ ಅವರನ್ನು ಉತ್ತರ ವಲಯದ ಹೊಸ ಕಮಾಂಡರ್‌ ಆಗಿ ನೇಮಿಸಲಾಗುತ್ತದೆ’ ಎಂದು ಸ್ಪಷ್ಟನೆ ನೀಡಿದೆ. 

ADVERTISEMENT

ಅಲ್ಲದೇ, ಸೇನೆಯ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ ಎಂದೂ ಕೆಲವು ಪತ್ರಗಳನ್ನು ಸಾಮಾಜಿಕ ‌ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಅವು ನಕಲಿ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.