ADVERTISEMENT

ಪ್ರಧಾನಿ ಮೋದಿ ಫೋಟೊ ಹರಿದ ಕಾಂಗ್ರೆಸ್‌ ಶಾಸಕನಿಗೆ ₹ 99 ದಂಡ!

ಅನಂತ್‌ ಪಟೇಲ್‌ ಎಂಬವರೇ ಈ ದಂಡ ಶಿಕ್ಷೆಗೆ ಒಳಗಾದವರು. ಅವರು ವಾಂಡ್ಸಾ ಕ್ಷೇತ್ರದ ಶಾಸಕರಾಗಿದ್ದಾರೆ.

ಪಿಟಿಐ
Published 28 ಮಾರ್ಚ್ 2023, 5:33 IST
Last Updated 28 ಮಾರ್ಚ್ 2023, 5:33 IST
   

ನವರಾಸಿ (ಗುಜರಾತ್): ಪ್ರತಿಭಟನೆಯೊಂದರ ವೇಳೆ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹರಿದು ಹಾಕಿದ್ದ ಕಾಂಗ್ರೆಸ್‌ ಶಾಸಕನಿಗೆ ಇಲ್ಲಿನ ನ್ಯಾಯಲಯವೊಂದು ₹ 99 ದಂಡ ವಿಧಿಸಿದೆ.

ಅನಂತ್‌ ಪಟೇಲ್‌ ಎಂಬವರೇ ಈ ದಂಡ ಶಿಕ್ಷೆಗೆ ಒಳಗಾದವರು. ಅವರು ವಾಂಡ್ಸಾ ಕ್ಷೇತ್ರದ ಶಾಸಕರಾಗಿದ್ದಾರೆ.

2017ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅನಂತ್‌ ಪಟೇಲ್‌ ಅವರು, ಕುಲಪತಿಗಳ ಕೊಠಡಿಗೆ ಪ್ರವೇಶಿಸಿ, ಮೇಜಿನ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದರು.

ADVERTISEMENT

ಘಟನೆ ಸಂಬಂಧ ಪಟೇಲ್‌ ಹಾಗೂ ಇನ್ನಿತರ 6 ಮಂದಿಯ ವಿರುದ್ಧ ಐಪಿಸಿಯ 143. 353,427, 447 ಹಾಗೂ 447ರಡಿ ಜಾಲಾಪೋರ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದಲ್ಲಿ ಪಟೇಲ್‌ ಅವರು ಐಪಿಸಿಯ 447ನೇ ವಿಧಿ ಅನ್ವಯ (ಅಕ್ರಮ ಪ್ರವೇಶ) ತಪ್ಪಿತಸ್ಥ ಎಂದು ನ್ಯಾಯಮೂರ್ತಿ ವಿ.ಎ ದದ್ದಲ್‌ ಅವರು ತೀರ್ಪು ನೀಡಿದ್ದಾರೆ.

ಮೂರು ಮಂದಿ ತಪ್ಪಿತಸ್ಥರು ಎಂದಿರುವ ನ್ಯಾಯಾಲಯವು ತಲಾ ₹ 99 ದಂಡ ವಿಧಿಸಿದೆ. ಪಾವತಿಸಲು ವಿಫಲವಾಗಿದ್ದೇ ಆದಲ್ಲಿ 7 ದಿನಗಳ ಸಾಮಾನ್ಯ ಸಜೆ ಅನುಭವಿಸಬೇಕು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.