ADVERTISEMENT

ಬಿಎಸ್‌ಎಫ್ ಅಧಿಕಾರಿಯ ₹125 ಕೋಟಿ ವಂಚನೆ ಬಯಲು: ₹14 ಕೋಟಿ, ಲಕ್ಸುರಿ ಕಾರು ವಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2022, 3:03 IST
Last Updated 18 ಜನವರಿ 2022, 3:03 IST
   

ಬೆಂಗಳೂರು: ಐಪಿಎಸ್ ಅಧಿಕಾರಿಯ ಸೋಗಿನಲ್ಲಿ ₹125 ಕೋಟಿ ವಂಚನೆ ಎಸಗಿರುವ ಬಿಎಸ್‌ಎಫ್‌ ಅಧಿಕಾರಿಯನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಗಡಿ ಭದ್ರತಾ ಪಡೆಯಲ್ಲಿ ಡೆಪ್ಯುಟಿ ಕಮಾಂಡೆಂಟ್ ಹುದ್ದೆಯಲ್ಲಿದ್ದ ಪ್ರವೀಣ್ ಯಾದವ್ ಬಂಧಿತ ಆರೋಪಿಯಾಗಿದ್ದಾರೆ.

ಆರೋಪಿಯಿಂದ ₹14 ಕೋಟಿ ನಗದು, ₹1 ಕೋಟಿ ಮೌಲ್ಯದ ಚಿನ್ನಾಭರಣ, ಬಿಎಂಡಬ್ಲೂ, ಮರ್ಸೀಡಿಸ್ ಮತ್ತು ಜೀಪ್ ಸಹಿತ ಏಳು ಲಕ್ಷುರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ಗುರುಗ್ರಾಮದ ಮಣೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ದಳದ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರವೀಣ್ ವಂಚನೆ ಕೃತ್ಯ ಎಸಗಿರುವುದು ಪತ್ತೆಯಾಗಿದೆ.

ಪ್ರವೀಣ್ ಕೃತ್ಯಕ್ಕೆ ಸಾಥ್ ನೀಡಿರುವ ಅವರ ಪತ್ನಿ ಮಮತಾ ಯಾದವ್ ಮತ್ತು ಸಹೋದರಿ ರಿತು ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ರಿತು ಅವರು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಎನ್‌ಎಸ್‌ಜಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪ್ರವೀಣ್ ಕೃತ್ಯಕ್ಕೆ ಸಹಕರಿಸಿದ್ದರು.

ಪ್ರವೀಣ್, ಎನ್‌ಎಸ್‌ಜಿಯಲ್ಲಿ ಟೆಂಡರ್ ಕಾಂಟ್ರಾಕ್ಟ್‌ಗಳನ್ನು ದೊರಕಿಸಿಕೊಡುವುದಾಗಿ ಹೇಳಿ ಜನರನ್ನು ವಂಚಿಸಿರುವುದು ಪತ್ತೆಯಾಗಿದೆ. ಷೇರು ಮಾರುಕಟ್ಟೆಯಲ್ಲಿ ₹60 ಲಕ್ಷ ಕಳೆದುಕೊಂಡ ಬಳಿಕ, ಅದನ್ನು ಮರಳಿ ಪಡೆಯಲು ಪ್ರವೀಣ್ ಜನರನ್ನು ವಂಚಿಸುವ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.