ADVERTISEMENT

ಯುದ್ಧವಿಮಾನ: ವಿದೇಶಿ ಕಂಪನಿಗಳೊಂದಿಗೆ ಕೈಜೋಡಿಸಲು ಎಚ್‌ಎಎಲ್‌ ಸಶಕ್ತ -ಮಾಧವನ್

ಪಿಟಿಐ
Published 3 ಜುಲೈ 2022, 13:01 IST
Last Updated 3 ಜುಲೈ 2022, 13:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಬಹು ಕಾರ್ಯ ಯುದ್ಧವಿಮಾನ’ (ಎಂಆರ್‌ಎಫ್‌ಎ) ಕಾರ್ಯಕ್ರಮದಡಿ, ಭಾರತದಲ್ಲಿ ಯುದ್ಧವಿಮಾನಗಳನ್ನು ತಯಾರಿಸಲು ಯಾವುದೇ ವಿದೇಶಿ ಕಂಪನಿಗಳೊಂದಿಗೆ ಕೈಜೋಡಿಸಲು ಸಂಸ್ಥೆ ಸಶಕ್ತವಾಗಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಎಚ್ಎಎಲ್‌) ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್ ಭಾನುವಾರ ಹೇಳಿದ್ದಾರೆ.

‘ಎಂಆರ್‌ಎಫ್‌ಎ ಕಾರ್ಯಕ್ರಮದಡಿ ಭಾರತೀಯ ವಾಯುಪಡೆಗೆ ಯಾವ ರೀತಿಯ ಯುದ್ಧವಿಮಾನ ಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬೇಕು. ಭಾರತದ ಯಾವ ಸಂಸ್ಥೆಯ ಸಹಭಾಗಿತ್ವ ಹೊಂದಬೇಕು ಎಂಬ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಯುದ್ಧವಿಮಾನ ತಯಾರಿಸುವ ವಿದೇಶಿ ಕಂಪನಿಗೆ ನೀಡಬೇಕು’ ಎಂದು ಹೇಳಿದ್ದಾರೆ.

‘ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸಲು ಬೇಕಾದ ಮೂಲಸೌಕರ್ಯ ಹಾಗೂ ಅನುಭವವನ್ನು ಎಚ್‌ಎಎಲ್ ಹೊಂದಿದೆ. ಹೀಗಾಗಿ, ಭಾರತೀಯ ವಾಯುಪಡೆಗೆ ಯುದ್ಧವಿಮಾನಗಳನ್ನು ತಯಾರಿಸುವ ಕಾರ್ಯಕ್ರಮದಲ್ಲಿ ಭಾರತೀಯ ಭಾಗಿದಾರ ಸಂಸ್ಥೆಯಾಗಲು ಎಚ್‌ಎಎಲ್ ಉತ್ಸುಕವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.