ADVERTISEMENT

ಬೇರೆ ದೇಶದಲ್ಲೂ ನನಗೆ ಈ ಅನುಭವ ಆಗಿತ್ತು: ದ.ಕೊರಿಯಾದ ಮಹಿಳಾ ಯೂಟ್ಯೂಬರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2022, 12:38 IST
Last Updated 1 ಡಿಸೆಂಬರ್ 2022, 12:38 IST
ಟ್ವಿಟರ್ ಸ್ಕ್ರೀನ್‌ಶಾಟ್ (@Beaver_R6)
ಟ್ವಿಟರ್ ಸ್ಕ್ರೀನ್‌ಶಾಟ್ (@Beaver_R6)   

ಮುಂಬೈ: ಬೇರೆ ದೇಶದಲ್ಲಿಯೂ ನನಗೆ ಈ ರೀತಿಯ ಕೆಟ್ಟ ಅನುಭವ ಆಗಿತ್ತು ಎಂದು ಮುಂಬೈಯ ಬೀದಿಯಲ್ಲಿ ಕಿರುಕುಳಕ್ಕೊಳಗಾದ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.

ಆದರೆ ಆ ಸಮಯದಲ್ಲಿ ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗಲಿಲ್ಲ. ಭಾರತದಲ್ಲಿ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ADVERTISEMENT

ನಾನು ಕಳೆದ ಮೂರು ವಾರಗಳಿಗೂ ಹೆಚ್ಚು ಸಮಯದಿಂದ ಮುಂಬೈಯಲ್ಲಿದ್ದೇನೆ. ಇನ್ನು ಹೆಚ್ಚು ಕಾಲ ಇಲ್ಲಿರಲು ಬಯಸುತ್ತೇನೆ ಎಂದು ಹೇಳಿದರು.

ಈ ಒಂದು ಕೆಟ್ಟ ಘಟನೆಯಿಂದ ನನ್ನ ಇಡೀ ಪ್ರಯಾಣವನ್ನು ಹಾಳುಮಾಡಲು ಮತ್ತು ಇತರೆ ದೇಶಗಳಿಗೆ ಅದ್ಭುತವಾದ ಭಾರತವನ್ನು ತೋರಿಸುವ ನನ್ನ ಉತ್ಸಾಹವನ್ನು ಕುಂದಿಸಲು ಬಯಸುದಿಲ್ಲ ಎಂದು ಹೇಳಿದರು.

ಮುಂಬೈಯ ಬೀದಿಯಲ್ಲಿ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ ಮೇಲೆ ನಡೆದಿರುವ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.