ADVERTISEMENT

ಹಾಥರಸ್ ಅತ್ಯಾಚಾರ ಪ್ರಕರಣ: ವಾರಾಣಸಿಯಲ್ಲಿ ಸ್ಮೃತಿ ಇರಾನಿ ಕಾರು ತಡೆದು ಆಕ್ರೋಶ

ಪಿಟಿಐ
Published 3 ಅಕ್ಟೋಬರ್ 2020, 10:53 IST
Last Updated 3 ಅಕ್ಟೋಬರ್ 2020, 10:53 IST
ವಾರಾಣಸಿಯಲ್ಲಿ ಸ್ಮೃತಿ ಇರಾನಿಯನ್ನು ತಡೆದ ಪ್ರತಿಭಟನಕಾರರು
ವಾರಾಣಸಿಯಲ್ಲಿ ಸ್ಮೃತಿ ಇರಾನಿಯನ್ನು ತಡೆದ ಪ್ರತಿಭಟನಕಾರರು   

ಲಖನೌ: ಹಾಥರಸ್‌ನಲ್ಲಿ ನಡೆದ ಸಾಮೂಹಿಕ‌ ಅತ್ಯಾಚಾರ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ವಾರಾಣಸಿಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿಯ 19 ವರ್ಷದ ಯುವತಿ ಮೇಲಾದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ರೈತರೊಂದಿಗೆ ಮಾತುಕತೆ ನಡೆಸಲು ವಾರಾಣಸಿಗೆ ಬಂದ ಸ್ಮೃತಿ ಇರಾನಿ ಅವರ ಕಾರನ್ನು ತಡೆದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಸಂತ್ರಸ್ತೆಯ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ೀ ವೇಳೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕಾಂಗ್ರೆಸ್‌ ವಕ್ತಾರ ಲಲನ್‌ ಕುಮಾರ್‌ ಅವರು ಹೇಳಿದರು.

ADVERTISEMENT

ಗೃಹ ಬಂಧನ

ಹಾಥರಸ್‌ಗೆ ಶನಿವಾರ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಯುಪಿಸಿಸಿ ಅಧ್ಯಕ್ಷ ಅಜಯ್‌ ಕುಮಾರ್‌ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಅಜಯ್‌ ಕುಮಾರ್‌ ಮನೆ ಹೊರಗಡೆ ಉತ್ತರ ಪ್ರದೇಶದ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಅವರನ್ನು ಮನೆಯಿಂದ ಹೊರ ಬರದಂತೆ ತಡೆ ಹಿಡಿಯಲಾಗಿದೆ ಎಂದು ಪಕ್ಷದ ವಕ್ತಾರಅನ್ಶು ಅವಸ್ಥಿ ಮಾಹಿತಿ ನೀಡಿದರು.

ರಾಹುಲ್‌ ಭೇಟಿ ವೇಳೆ ‌ ಕಾಂಗ್ರೆಸ್‌ ಸಂಸದರ ನಿಯೋಗದೊಂದಿಗೆ ಅಜಯ್‌ ಕುಮಾರ್‌ ಸೇರದಂತೆ ತಡೆಯಲು ಅವರನ್ನು ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.