ADVERTISEMENT

ಮೇಘಾಲಯ: ಭಾರಿ ಮಳೆ, ಭೂಕುಸಿತ; ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 15:51 IST
Last Updated 17 ಜೂನ್ 2023, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಲ್ಲಾಂಗ್: ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್‌ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ, ಭೂ ಕುಸಿತದಿಂದಾಗಿ ನಂಗ್‌ಸ್ಟೊಯಿನ್ ಪ್ರದೇಶದ ಮವಿಯಾಂಗ್ ಪಿಂಡೆನ್‌ಗ್ರಿಯಲ್ಲಿನ ಮನೆಯೊಂದರೊಳಗೆ ಸಿಲುಕಿದ್ದ 15 ಹಾಗೂ 10 ವರ್ಷದ ಸಹೋದರಿಯರಿಬ್ಬರು ಶನಿವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯ ಥಿಡ್ಡಿಯೆಂಗ್‌ ಹಳ್ಳಿಯ ಬಳಿಯಿರುವ ಆಳದ ಕಮರಿಗೆ ಮಂಗಳವಾರ ಸಂಜೆ ಟ್ರಕ್‌ವೊಂದು ಬಿದ್ದಿದ್ದು, ಇದರಲ್ಲಿದ್ದ ಆರು ಜನರಲ್ಲಿ ನಾಲ್ವರ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಪೂರ್ವ ಜೈನ್ತಿಯಾ ಹಿಲ್ಸ್‌ ಜಿಲ್ಲೆಯಲ್ಲಿ ಮಣ್ಣು ಕುಸಿದಿದ್ದು, ಮೇಘಾಲಯದಿಂದ ಅಸ್ಸಾಂನ ಪೂರ್ವ ಭಾಗ, ಮಿಜೋರಾಂ, ತ್ರಿಪುರಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 6ರ ಸಂಪರ್ಕ ಕಡಿತಗೊಂಡಿದೆ.

ADVERTISEMENT

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯೂ ಸೇರಿದಂತೆ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಸತತ 9 ದಿನಗಳಿಂದಲೂ ಭೂ ಕುಸಿತ, ಮಣ್ಣು ಕುಸಿತ, ಭಾರಿ ಮಳೆಯ ವರದಿ ದಾಖಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.